ಆನೇಕಲ್ (ಬೆಂಗಳೂರು ಗ್ರಾಮಾಂತರ) : ಇಬ್ಬರು ಮಕ್ಕಳನ್ನು ಕೊಂದು ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಕೊಪ್ಪ ಸಮೀಪದ ಬಿಟಿಎಂ ಬಡಾವಣೆಯಲ್ಲಿ ನಡೆದಿದೆ. ಬಿಟಿಎಂ ಬಡಾವಣೆ ನಿವಾಸಿ ಹರೀಶ್ ( 35) ಪ್ರಜ್ವಲ್(6) ರಿಷಬ್(4) ಮೃತರು. ಇನ್ನು ಈ ಇದೇ ತಿಂಗಳು ಮೇ. 10 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮೊದಲು ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಕಾಲ್ ಮಾಡಿದ್ದು, ತಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ತನಗೆ ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಪತ್ನಿಗೆ ನೀಡು ಎಂದು ಹರೀಶ್ ಹೇಳಿದ್ದರಂತೆ. ಕೂಡಲೇ ಹರೀಶ್ ಇರುವ ಲೊಕೇಷನ್ ಬಗ್ಗೆ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ತಾನು ವಾಸವಿದ್ದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಇದನ್ನೂ ಓದಿ : ಮದ್ದೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು; ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
ಹರೀಶ್ 2007 ರಲ್ಲಿ ಅಕ್ಕನ ಮಗಳು ಅನನ್ಯನ್ನು ಪ್ರೀತಿಸಿ ಮದುವೆ ಆಗಿದ್ದನು. ಬಳಿಕ ಗಾರ್ವೇಬಾವಿ ಪಾಳ್ಯದಲ್ಲಿ ಪ್ರತ್ಯೇಕ ವಾಸವಾಗಿದ್ದರು. ವಿವಾಹದ ಬಳಿಕ ಪದೇ ಪದೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಜೊತೆಗೆ ಪತ್ನಿ ಹೈಪೈ ಜೀವನದಿಂದ ಪರಸ್ಪರ ಗಲಾಟೆ ಕೂಡ ನಡೆದಿದ್ದು, 2015ರಲ್ಲಿ ಹಿರಿಯ ಸಮ್ಮುಖದಲ್ಲಿ ರಾಜಿ ಸಂಧಾನವಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ : ಹಳಿಯಾಳ: ಅರಣ್ಯ ಇಲಾಖೆ ಉರಗ ರಕ್ಷಕನ ಕಾಲು ಕಡಿದು ಭೀಕರ ಹತ್ಯೆ
ಬಳಿಕ ಹರೀಶ್ ಪೋಷಕರ ಮನೆಯಲ್ಲಿ ವಾಸವಿದ್ದು, 2021 ರ ಬಳಿಕ ಪ್ರತ್ಯೇಕ ಮನೆ ಮಾಡಲು ಪತ್ನಿ ಒತ್ತಾಯ ಮಾಡಿದ್ದರಂತೆ. ಕೊನೆಗೆ ಪ್ರತ್ಯೇಕ ಮನೆ ಮಾಡಿ ಮಕ್ಕಳೊಂದಿಗೆ ವಾಸವಿದ್ದ ಹರೀಶ್. ಕೆಲವೇ ದಿನಗಳಲ್ಲಿ ಮನೆ ಬಿಟ್ಟು ಪರ ಪುರುಷನೊಂದಿಗೆ ಪತ್ನಿ ಅನನ್ಯ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ತಾಯಿ ಇಲ್ಲದ ತಬ್ಬಲಿಗಳಂತೆ ಮಕ್ಕಳನ್ನು ಹರೀಶ್ ತಾನೆ ಪೋಷಣೆ ಮಾಡುತ್ತಿದ್ದ.
ಗಂಡನನ್ನು ಬಿಟ್ಟು ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿ ಅನನ್ಯ ಪದೇ ಪದೇ ಹಣಕ್ಕೆ ಬೇಡಿಕೆಯಿಟ್ಟು ಹರೀಶ್‌ಗೆ ಕಿರುಕುಳ ನೀಡುತ್ತಿದ್ದಳಂತೆ. ಹಣ ನೀಡದಿದ್ದರೆ ಮನೆ ಬಳಿ ಬಂದು ರಂಪಾಟ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಹೀಗಾಗಿ ಕೆಲಸದ ಜೊತೆ ಅನಾಥರಾದ ಮಕ್ಕಳ ಬಗ್ಗೆ ಮೃತ ಹರೀಶ್ ತುಂಬಾ ನೊಂದಿದ್ದ ಎಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಹರೀಶ್ ತಾಯಿಗೂ ಕರೆ ಮಾಡಿ ಪತ್ನಿ ಅನನ್ಯ ಗಲಾಟೆ ಮಾಡಿದ್ದಳು ಎಂಬ ಆರೋಪವೂ ಇದೆ. ಹೆಂಡತಿಯ ಹಣದಾಸೆ ಮತ್ತು ಐಷಾರಾಮಿ ಜೀವನಕ್ಕೆ ಬೇಸತ್ತ ಪರಿ ಹರೀಶ್, ಮನೆಯಲ್ಲಿ ಮಕ್ಕಳನ್ನು ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆ ಸಂಬಂಧ ಮೃತನ ಮನೆಯವರು ನೀಡಿದ ದೂರಿನಂತೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಪೇಂಟರ್ ಸಾವು