ದೊಡ್ಡಬಳ್ಳಾಪುರ: ಮುನೇಶ್ವರಸ್ವಾಮಿ ಪೂಜೆಗಾಗಿ ಪೂಜಾ ಸಾಮಗ್ರಿಗಳನ್ನ ತರಲು ಬೈಕ್ನಲ್ಲಿ ಹೊರಟಿದ್ದ ಅಪ್ಪ-ಮಗ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಲೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಶಿವಪುರ ಗ್ರಾಮದ ಬಳಿ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ತಂದೆ ಮೀಸೆ ರಾಮಯ್ಯ (64) ಮಗ ನಾರಾಯಣ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಸೊಣ್ಣಪ್ಪನಹಳ್ಳಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.
![father-and-son-died-in-bike-accident-at-doddaballapura](https://etvbharatimages.akamaized.net/etvbharat/prod-images/14739850_thum.jpg)
ಮನೆಯಲ್ಲಿ ಮುನೇಶ್ವರಸ್ವಾಮಿ ಪೂಜಾ ಕಾರ್ಯಕ್ರಮ ಇದ್ದಿದ್ದರಿಂದ ಇಂದು ಬೆಳಗ್ಗೆ ತಂದೆ-ಮಗ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ತರಲು ಸ್ಕೂಟರ್ನಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ್ಟಿದ್ದರು. ಮಾರ್ಗ ಮಧ್ಯದಲ್ಲಿ ನಿಯಂತ್ರಣ ತಪ್ಪಿ ಸ್ಕೂಟರ್ ಮರಕ್ಕೆ ಗುದ್ದಿ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.
ಮತ್ತೊಂದೆಡೆ ಅಪರಿಚಿತ ವಾಹನ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರಬಹುದೆಂಬ ಸಂಶಯವೂ ಸಹ ವ್ಯಕ್ತವಾಗಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಹಿಜಾಬ್ ವಿರುದ್ಧದ ಹೈಕೋರ್ಟ್ನ ತೀರ್ಪು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ : ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್