ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಶನಿವಾರ ಮನೆ ಕೆಡವುವಾಗ ಇಂಜಿನಿಯರ್ವೊಬ್ಬರ ಮನೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (EVM) ಕಂಟ್ರೋಲ್ ಯುನಿಟ್‌ಗಳು ದೊರೆತಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮೋಪರಹಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಅವರ ಮನೆ ನೆಲಸಮಗೊಳಿಸುವಾಗ ಅಚ್ಚರಿ ಕಾದಿತ್ತು. ಇವು 2018ರ ಚುನಾವಣೆಯಲ್ಲಿ ಬಳಸಿ ತಿರಸ್ಕೃತಗೊಂಡ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್ಗಳು ಎಂದು ತಹಶೀಲ್ದಾರ್ ಮೋಹನ ಕುಮಾರಿ ಮಾಹಿತಿ ನೀಡಿದರು. ಸ್ಥಳಕ್ಕೆ ತಹಶೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲಿಸಿ 7 ಮಷಿನ್ಗಳನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ಇದನ್ನೂ ಓದಿ: ಇವಿಎಂ ಯಂತ್ರಗಳ ದುರುಪಯೋಗ ಆಗಲ್ಲ.. ಕಾಂಗ್ರೆಸ್ ಮನವಿ ತಿರಸ್ಕಾರ: ಮುಖ್ಯ ಚುನಾವಣಾ ಆಯುಕ್ತರ ಸ್ಟಷ್ಟನೆ