ನೆಲಮಂಗಲ: ನಗರಸಭೆಯ ಪಂಪ್ ಹೌಸ್ ಬಳಿಯ ಮುಂದಿದ್ದ ನೀಲಗಿರಿ ಮರಗಳನ್ನು ಕತ್ತರಿಸಿದ ಕಾರಣಕ್ಕೆ ಬಿಜೆಪಿ ಮುಖಂಡ ಮತ್ತು ಮಾಜಿ ನಗರಸಭಾ ಸದಸ್ಯ ಕೇಶವಮೂರ್ತಿ.ಸಿ ಮತ್ತು ಆತನ ಬೆಂಬಲಿಗರು ನೆಲಮಂಗಲ ನಗರಸಭೆ ಆಯುಕ್ತರ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಆಯುಕ್ತ ಮಂಜುನಾಥ್ ಸ್ವಾಮಿಗೆ ಧಮ್ಕಿ ಹಾಕಿದ ಕೇಶವಮೂರ್ತಿ, ಕಚೇರಿಯಿಂದ ಹೊರ ಹೋಗಿ ಬೀಗ ಹಾಕುತ್ತೇನೆ ಎಂದಿರುವ ಆರೋಪ ಕೇಳಿ ಬಂದಿದೆ.
ನಗರಸಭೆ ಅಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸದೆ ನೀಲಗಿರಿ ಮರಗಳನ್ನು ಕಡಿದಿದ್ದಾರೆ ಅನ್ನೋದು ಕೇಶವಮೂರ್ತಿ ಅವರ ಆರೋಪವಾಗಿದೆ.
ಆದರೆ, ನಗರಸಭೆ ಅಧಿಕಾರಿಗಳ ಪ್ರಕಾರ ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಮತ್ತು ನೀರಿನ ಕೊರತೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀಲಗಿರಿ ಬೆಳೆಯದಂತೆ ಆದೇಶಿಸಲಾಗಿದೆ. ಅದರಂತೆ ನೀಲಗಿರಿ ಮರ ಕಟಾವು ಮಾಡಲಾಗಿದೆ ಎಂದರು.