ETV Bharat / state

ಆನೆ ನಡೆದಿದ್ದೇ ದಾರಿ! ಗಡಿಯಲ್ಲಿ ಗ್ರಾಮಸ್ಥರಿಗೆ ಪ್ರಾಣಸಂಕಟ

author img

By

Published : Apr 21, 2019, 7:41 PM IST

ತಮಿಳುನಾಡು-ಕರ್ನಾಟಕ ಗಡಿಭಾಗಗಳಲ್ಲಿ ಗಜಪಡೆ ಬೀಡು ಬಿಟ್ಟಿದ್ದು, ಬನ್ನೇರುಘಟ್ಟ, ಜವಳಗೆರೆ  ಅರಣ್ಯಪ್ರದೇಶದ ಸುತ್ತಮುತ್ತಲಿನ ಹಳ್ಳಿಗರಿಗೆ ಭೀತಿ ಉಂಟಾಗಿದೆ.

ಗಡಿಯಲ್ಲಿ ಗಜಪಡೆಯ ಓಡಾಟ

ಆನೇಕಲ್: ಕಳೆದ ಎಂಟು ತಿಂಗಳಿಂದ ತಮಿಳುನಾಡು-ಕರ್ನಾಟಕದ ಗಡಿಯಲ್ಲಿರುವ ಆನೆ ಕಾರಿಡಾರ್ ಸುತ್ತಲ ಪ್ರದೇಶವನ್ನು ಗಜಪಡೆ ಆಕ್ರಮಿಸುತ್ತಿದ್ದು, ಜನರು ರಸ್ತೆಯಲ್ಲಿ ಓಡಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬನ್ನೇರುಘಟ್ಟ,ಜವಳಗೆರೆ ಅರಣ್ಯಗಳು ಹಬ್ಬಿರುವಂತಹ ಪ್ರದೇಶಗಳಲ್ಲಿ ಆನೆ ಕಾರಿಡಾರ್ ಇದೆ. ಇಲ್ಲಿ ಆನೆ ನಡೆದದ್ದೇ ಹಾದಿ ಎನ್ನುವಂತಾಗಿದೆ. ಈ ಕಾರಿಡಾರ್ ನಡುವೆ ಇರುವ ಹತ್ತಾರು ಗ್ರಾಮಗಳಲ್ಲಿ ಜನವಸತಿ ಇದೆ. ಆನೆದಾಳಿಯ ಭೀತಿ ನಿವಾಸಿಗಳನ್ನು ಕಾಡುತ್ತಿದ್ದು, ಸೂಕ್ತ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.

ಗಡಿಯಲ್ಲಿ ಗಜಪಡೆಯ ಓಡಾಟ

ಕಾಡು,ತೋಟಗಳೇ ಹೆಚ್ಚಿರುವ ಈ ಭಾಗಗಳಲ್ಲಿ ಸಹಜವಾಗಿಯೇ ಆನೆಗಳು ಆಹಾರ ಹುಡುಕಿ ಬರುತ್ತಿವೆ. ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡರೂ ಫಲಪ್ರದವಾಗಿಲ್ಲ. ಗ್ರಾಮದ ಕೆರೆ, ರಸ್ತೆ, ಊರುಗಳಲ್ಲಿ ಆನೆಗಳು ನಿರ್ಭೀತಿಯಿಂದ ಓಡಾಡುತ್ತಿರುವುದು ಜನರಲ್ಲಿ ಭೀತಿ ಉಂಟುಮಾಡುತ್ತಿದೆ.

ತಮಿಳುನಾಡಿನ ಸೂಳಗಿರಿಯ ಅತ್ತಿಮೊಗಂ, ಕಾಮನದೊಡ್ಡಿ, ಬುಕ್ಕಸಾಗರಂ ಕಡೆಯ ಸುತ್ತ ಗ್ರಾಮಗಳ ನಡುವೆಯೇ ಆನೆಗಳು ಸುತ್ತಾಡುತ್ತಿವೆ. ಹೀಗೆ ಆನೆಗಳ ಕಾಟ ಮುಂದುವರಿದರೆ ಮುಂದೊಂದು ದಿನ ಅವುಗಳು ಜನರ ಮೂಲ ಜಾಗಗಳನ್ನು ಆಕ್ರಮಿಸಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ. ಹಾಗಾಗಿ ಇಲ್ಲಿನ ಜನರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Intro:ತಮಿಳುನಾಡು-ಕರ್ನಾಟಕದ ಗಡಿಯಲ್ಲಿರುವ ಆನೆ ಕಾರಿಡಾರ್ ಸುತ್ತಲ ಪ್ರದೇಶವನ್ನು ಆಕ್ರಮಿಸುತ್ತಿರುವ ಗಜಪಡೆ ಸಾಕುಪ್ರಾಣಿಗಳಷ್ಡು ಸಹಜವಾಗಿ ಸಂಚರಿಸುತ್ತಿವೆ. ಕಳೆದ ಎಂಟು ತಿಂಗಳಿಂದ ಆನೆ ಆಗಮನ ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿರುವುದರಿಂದ ಅರಣ್ಯಾಧಿಕಾರಿಗಳ ಯಾವ ತಂತ್ರವೂ ಆನೆಗಳಿಗೆ ಭಯಹುಟ್ಟಿಸುತ್ತಿಲ್ಲ.Body:ಒಮ್ಮೆ ಜನ ವಾಸಿಸುವ ಜಾಗಕ್ಕೆ ನಾಡು-ಮಾನವನ ಹೊರತು ಪಡಿಸಿ ವಾಸ ಮಾಡುವ ಅರಣ್ಯಕ್ಕೆ ಕಾಡು ಅಂತ ಅನ್ನಿಸುತ್ತಿತ್ತು. ಆದರೆ ಇತ್ತೀಚೆಗೆ ಆ ಕಲ್ಪನೆ ತಮಿಳುನಾಡು-ಕರ್ನಾಟಕದ ಗಡಿಯಲ್ಲಿ ವನ್ಯಜೀವಿಗಳು ಗ್ರಾಮಗಳಲ್ಲೇ ಬೀಡು ಬಿಡುತ್ತಿರುವ ಸಾಕ್ಷಿಗಳೇ ಹೆಚ್ಚಾಗುತ್ತಿವೆ. ಅದರಲ್ಲೂ ಬನ್ನೇರುಘಟ್ಟ-ಜವಳಗೆರೆ-ಸಾಮಿನತ್ತ ಅರಣ್ಯಗಳು ಹಬ್ಬಿರುವಂತಹ ಪ್ರದೇಶಗಳಲ್ಲಿ ಆನೆ ಕಾರಿಡಾರ್ ಹೆಚ್ಚಾಗಿದ್ದು ಆನೆ ನಡೆದದ್ದೇ ಹಾದಿ ಎನ್ನುವಂತಾಗಿದೆ. ಈ ಕಾರಿಡಾರ್ ನಡುವೆಯೇ ಗಡಿಭಾಗದ ಹತ್ತಾರು ಗ್ರಾಮಗಳು ನೆಲೆ ನಿಂತಿರುವುದರಿಂದ ಆನೆ ಓಡಾಟದ ಕಿರಿಕಿರಿ ಹಳ್ಳಿಗರ ಭೀತಿಗೆ ಕಾರಣವಾಗಿದೆ. ಅಲ್ಲದೆ ಹಸಿರು ಕಾಡು, ತೋಟ ಹೆಚ್ಚಿರುವ ಗಡಿಯಲ್ಲಿ ಆಗಾಗ ನಿರೀಕ್ಷಿತ ಮಟ್ಟಕ್ಕೆ ಮಳೆಯಾಗುತ್ತಿರುವುದರಿಮದ ಸಹಜವಾಗಿ ಗಜಪಡೆ ದಾಖಲೆ ಮಟ್ಟದಲ್ಲಿ ಇತ್ತ ಸುಳಿಯುತ್ತಿದೆ.
ಕಳೆದ ಎಂಟು ತಿಂಗಳಿಂದ ಇತ್ತೀಚೆಗೆ ಆನೆ ಆಗಮನ ವಿಪರೀತವಾಗಿ ಅರಣ್ಯಾಧಿಕಾರಿಗಳ ಯಾವ ತಂತ್ರಕ್ಕೂ ಬುದ್ದಿವಂತ ಆನರಗಳು ಕ್ಯಾರೆ ಎನ್ನುತ್ತಿಲ್ಲ. ಸಿಡಿದ ಪಟಾಕಿಗಳ ಸದ್ದು ಆನೆಗಳ ಸದ್ದಡಗಿಸುತ್ತಿಲ್ಲ. ಅದಲ್ಲದೆ ಗ್ರಾಮದ ಕೆರೆ, ರಸ್ತೆ, ಊರುಗಳಲ್ಲಿ ನಿರ್ಭಿಡೆಯಾಗಿ ಆನೆ ಹಿಂಡು ಸಾಮಾನ್ಯ ಸಾಕು ಜೀವಿಗಳಂತೆ ಸುತ್ತಾಡುತ್ತಿವರ. ಒಮ್ಮೆ ಆನೆ ಹೋದ ಕಡೆಯ ವಾತಾವರಣ ಗಮನಿಸಿತ್ತೆಂದರೆ ದಶಕಗಳು ಕಳೆದರು ಆ ಪ್ರದೇಶವನ್ನು ಗುರ್ತಿಸುವ ಚಾಣಾಕ್ಷತನ ಆನೆಗಳಿಗೆ ಕರಗತವಾಗುವುದರಿಂದ ತಮಿಳುನಾಡು ಸೂಳಗಿರಿಯ ಅತ್ತಿಮೊಗಂ, ಕಾಮನದೊಡ್ಡಿ, ಬುಕ್ಕಸಾಗರಂ ಕಡೆಯ ಸುತ್ತ ಗ್ರಾಮಗಳ ನಡುವೆಯೇ ಸುತ್ತಾಡುತ್ತಿವೆ. ದಾಖಲೆಯ ಮಟ್ಟದಲ್ಲಿ ಆನೆಗಳ ಹಿಂಡು ಗ್ರಾಮಗಳತ್ತ ಬರುತ್ತಿರುವುದರಿಂದ ಹೀಗೆ ಮುಂದುವರೆದರೆ ಮುಂದೊಂದು ದಿನ ಅವುಗಳ ಮೂಲಜಾಗಗಳನ್ನು ಆಕ್ರಮಿಸಿಕೊಳ್ಳುವುದರಲ್ಲಿ ಅಚ್ಚರಿಯಿಲ್ಲ ಎನ್ನುವ ಗ್ರಹಿಕೆ ಗಟ್ಟಿಗೊಳ್ಳುತ್ತಿದೆ. ಕೆರೆಗಳಲ್ಲಿ ಲೀಲಾಜಾಲವಾಗಿ ಈಜಾಡುತ್ತಾ ರಸ್ತೆಗಳ ನಡುವೆ ಓಡಾಡುತ್ತಾ ಮೇವನ್ನ ಅರಸಿ ಗಂಭೀರ ಹೆಜ್ಜೆಗಳನ್ನ ಭೀತಿಯಿಲ್ಲದೆ ಇಡುತ್ತಿರುವ ರೀತಿ ಇಂತಹ ಅನಿಸಿಕೆಗೆ ಪುಷ್ಟಿ ದೊರೆಯುತ್ತಿದೆ. ನಿನ್ನೆಯಷ್ಟೇ ಕಾಣಿಸಿಕೊಂಡಿದ್ದ ಆನೆಗಳು ಕಾಡಿಗೆ ಹೋಗಿವೆ ಎಂದು ಗ್ರಾಮಸ್ಥರ ಅನಿಸಿಕೆಯನ್ನು ಹುಸಿಗೊಳಿಸಿ ನಾವೇಕೆ ಹೋಗೋಣ ಅಂತ ಠಿಕಾಣಿ ಹೂಡಿ ಗ್ರಾಮಸ್ಥರಿಗೆ ಠಾಂಗ್ ಕೊಟ್ಟಿವೆ. Conclusion:ಜನರ ಗಲಾಟೆಗಳೂ ಆನೆಗಳಿಗೆ ಸಲುಗೆಯಾಗಿ ತಲರಕೆಡಿಸಿಕೊಳ್ಖುವ ಗೋಜಿಗೆ ಗಜಪಡೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ಇದೆಲ್ಲದರ ನಡುವೆ ಸಿಕ್ಕಿಕೊಂಡಿರುವ ಮಾನವ-ಪ್ರಾಣಿ ಸಂಘರ್ಷವನ್ನು ಗಂಭೀರವಾಗಿ ತೆಗೆದುಕೊಂಡು ಆನೆಗಳನ್ನ ಕಾಡಿಂದ ನಾಡಿಗೆ ಬರುವುದನ್ನು ತಡೆಯಲು ಹೊಸ ತಂತ್ರವನ್ನು ಹೆಣೆಯುತ್ತಾದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.