ನೆಲಮಂಗಲ: ಬೆಂಗಳೂರು ನಗರ, ಸುತ್ತಮುತ್ತಲ ಪ್ರದೇಶದಲ್ಲಿ ನಡೆದ ಹಲವು ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲುಕುಂಟೆ ಪೊಲೀಸರು 8 ಮಂದಿ ಕಳ್ಳರನ್ನು ಬಂಧಿಸಿದ್ದು, 23 ಬೈಕ್ ಮತ್ತು 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರ ಮತ್ತು ನೆಲಮಂಗಲ, ಮಾದನಾಯಕನಹಳ್ಳಿ, ಪೀಣ್ಯ, ಬಾಗಲುಕುಂಟೆ, ಸೋಲದೇವನಹಳ್ಳಿ, ಪೀಣ್ಯಾ ಹಾಗು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳನ್ನು ಮಂಜುನಾಥ್ ಅಲಿಯಾಸ್ ಕೋಳಿ ಮಂಜ (31), ದೀಪಕ್ ಅಲಿಯಾಸ್ ದೀಪು (31), ಮನು ಅಲಿಯಾಸ್ ಮಹೇಂದ್ರ (21) ದಯಾನಂದ್ ಅಲಿಯಾಸ್ ದಯಾ (25), ಮುನಿಸ್ವಾಮಿ ಅಲಿಯಾಸ್ ಸ್ವಾಮಿ (34), ಸತೀಶ್ (24), ಪ್ರೇಮ (50) ಹಾಗು ಅನ್ನಪೂರ್ಣ ಅಲಿಯಾಸ್ ಅನು (28) ಎಂದು ಗುರುತಿಸಲಾಗಿದೆ.
ಬಾಗಲುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.