ಬೆಂಗಳೂರು: 8 ದಿನದ ಹೆಣ್ಣು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸೋಲದೇವಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದೆ.
ಮಾರ್ಷಲ್ ಹಾಗೂ ತಮಿಳ್ ಸೆಲ್ವಿ ದಂಪತಿಯ ಒಂಬತ್ತು ದಿನದ ನವಜಾತ ಹೆಣ್ಣು ಶಿಶು ನಿನ್ನೆ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಹುಟ್ಟಿದಾಗಿನಿಂದ ಖಾಯಿಲೆಯಿಂದ ಶಿಶು ಬಳಲುತ್ತಿತ್ತು ಎಂದು ಹೇಳಲಾಗಿದೆ. ಅಲ್ಲದೇ ಮಗು ಸಾವಿನ ಹಿಂದೆ ಮನೆಯವರ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಮಗುವಿನ ಅಜ್ಜಿ ಪರಮೇಶ್ವರಿ ಹಾಗೂ ಮನೆಯವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೆಣ್ಣು ಶಿಶು ಎಂದು ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಗುವನ್ನು ಉಸಿರುಗಟ್ಟಿಸಿ ಸಾಯಿಸಿರುವ ಗುಮಾನಿ ವ್ಯಕ್ತವಾಗಿದ್ದು, ಸದ್ಯ ಮರಣೋತ್ತರ ಪರೀಕ್ಷೆ ಸಲುವಾಗಿ ಸಪ್ತಗಿರಿ ಆಸ್ಪತ್ರೆಗೆ ಮಗುವಿನ ಮೃತದೇಹವನ್ನು ರವಾನಿಸಲಾಗಿದೆ.