ದೊಡ್ಡಬಳ್ಳಾಪುರ : ಪರಿಶಿಷ್ಟ ಸಮುದಾಯವೇ ಹೆಚ್ಚಿರುವ ತಾಲೂಕಿನ ಪಾಲ್ ಪಾಲ್ ದಿನ್ನೆ ಕಾಲೋನಿ ನಿವಾಸಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ಇಲ್ಲಿ 1992ರಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಪ್ರಾರಂಭವಾಗಿನಿಂದ ಕಾಲೋನಿ ಮೀಸಲು ಕ್ಷೇತ್ರವಾಗಿಲ್ಲ. ಇದರಿಂದ ಕಾಲೋನಿಯಿಂದ ಯಾರು ಸಹ ಗ್ರಾಮ ಪಂಚಾಯತ್ ಸದಸ್ಯರಾಗಲಿಲ್ಲ. ಕಾಲೋನಿ ನಿವಾಸಿಗಳ ಸಮಸ್ಯೆಗಳನ್ನ ಕೇಳುವರೇ ಇಲ್ಲದ್ದಂತ್ತಾಗಿದೆ ಎಂದು ಸ್ಥಳೀಯ ನಿವಾಸಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕಾಲೋನಿಯನ್ನ ಮೀಸಲು ಕ್ಷೇತ್ರವೆಂದು ಘೋಷಿಸುವಂತೆ ಕಾಲೋನಿ ನಿವಾಸಿಗಳು ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ದೊಡ್ಡಬಳ್ಳಾಪುರ ತಹಶೀಲ್ದಾರ್ ಕಾಲೋನಿಗೆ ಭೇಟಿ, ಸಮಸ್ಯೆ ಅಲಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಹಾಕಿದ ಪಾಲ್ ಪಾಲ್ ದಿನ್ನೆ ಕಾಲೋನಿ ನಿವಾಸಿಗಳ ನೋವಿಗೆ ಧ್ವನಿಯಾದ ಈಟಿವಿ ಭಾರತ ನಮ್ಮ ಕಾಲೋನಿಯನ್ನು ಮೀಸಲು ಕ್ಷೇತ್ರ ಮಾಡಿ, ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂಬ ಶೀರ್ಷಿಕೆಯಡಿ ವಿವರವಾದ ವರದಿ ಪ್ರಸಾರ ಮಾಡಿತ್ತು.
ಈಟಿವಿ ಭಾರತ ವರದಿಯಿಂದ ಎಚ್ಚೆತ್ತ ತಾಲೂಕು ಆಡಳಿತ ಕಾಲೋನಿ ನಿವಾಸಿಗಳ ಸಮಸ್ಯೆ ಅಲಿಸಲು ಮುಂದಾಗಿದೆ, ತಹಶೀಲ್ದಾರ್ ಶಿವರಾಜ್ ನೇತೃತ್ವದಲ್ಲಿ ಪೊಲೀಸರು ಮತ್ತು ಇತರೆ ಅಧಿಕಾರಿಗಳ ತಂಡ ಪಾಲ್ ದಿನ್ನೆ ಕಾಲೋನಿಗೆ ಭೇಟಿ ಜನರ ಸಮಸ್ಯೆಗಳನ್ನ ಅಲಿಸಿದರು. ಚರಂಡಿ ಸ್ವಚ್ಛತೆ, ಬೀದಿ ದೀಪ ಮತ್ತು ಸ್ಮಶಾನಕ್ಕೆ ದಾರಿ ಮಾಡಿ ಕೊಡುವಂತೆ ಜನರು ಮನವಿ ಮಾಡಿದರು. ಈ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಇದರ ಜೊತೆ ಕಾಲೋನಿ ನಿವಾಸಿಗಳ ಪ್ರಮುಖ ಬೇಡಿಕೆಯಾದ ಮೀಸಲು ಕ್ಷೇತ್ರ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಾನೂನು ಪ್ರಕಾರ ಸಹಾಯ ಮಾಡುವ ಭರವಸೆ ನೀಡಿದರು. ತಹಶೀಲ್ದಾರ್ ಭರವಸೆಗೆ ಸ್ಥಳೀಯ ನಿವಾಸಿಗಳು ಸಹಮತ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.