ಬೆಂಗಳೂರು: ಬೆ.ಗ್ರಾಮಾಂತರ ಜಿಲ್ಲೆಗೆ ರವಿ .ಡಿ ಚನ್ನಣ್ಣನವರ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದ ನಂತರ ಪೊಲೀಸರು ಸಮಾಜಮುಖಿ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.
ಕೊರೊನಾದಿಂದ ದೇಶವೇ ಲಾಕ್ಡೌನ್ನಲ್ಲಿರುವಾಗ ನಿರ್ಗತಿಕರು ಹಾಗೂ ಹಸಿವಿನಿಂದ ಕಣಗೆಟ್ಟಿರುವ ಜನರಿಗಾಗಿ ಕರುಣೆಯ ಗೋಡೆ ಎಂಬ ಹೆಸರಿನಲ್ಲಿ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.
ಕರುಣೆಯ ಗೋಡೆ ಶ್ರೀಮಂತರು ಮತ್ತು ಬಡವರ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಗರದ ಕೊಂಗಾಡಿಯಪ್ಪ ಬಸ್ ನಿಲ್ದಾಣದಲ್ಲಿರುವ ಕರುಣೆಯ ಗೋಡೆಯಲ್ಲಿ ಸಾರ್ವಜನಿಕರು ತಮಗೆ ಅಗತ್ಯವಿಲ್ಲದಿದ್ದ ವಸ್ತುಗಳನ್ನ ಇಲ್ಲಿ ಇಡಲು ಮನವಿ ಮಾಡಲಾಗಿದೆ. ಬಟ್ಟೆ, ಹಣ್ಣು - ಹಂಪಲು, ಆಹಾರ ಪದಾರ್ಥಗಳನ್ನು ಇಡಲು ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಹಾವಳಿಯಿಂದ ನಿರ್ಗತಿಕರಿಗೆ ಇದೇ ಕರುಣೆಯ ಗೋಡೆ ಆಸರೆಯಾಗಿದೆ. ದೊಡ್ಡಬಳ್ಳಾಪುರ ಪೊಲೀಸರು ಮತ್ತು ರವಿ ಡಿ ಚನ್ನಣ್ಣನವರ್ ಅಭಿಮಾನಿಗಳು ಬನ್, ಬಿಸ್ಕತ್, ಹಣ್ಣು, ನೀರಿನ ಬಾಟಲ್ಗಳನ್ನ ಕರುಣೆಯ ಗೋಡೆಯಲ್ಲಿ ಇಟ್ಟಿದ್ದು, ಹಸಿದವರು ಇಲ್ಲಿನ ಆಹಾರವನ್ನು ತೆಗೆದು ಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ನಿರ್ಗತಿಕರು ಬಂದು ತಮಗೆ ಇಷ್ಟವಾದ ಆಹಾರ ತೆಗೆದುಕೊಂಡು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.