ETV Bharat / state

ಬೆಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ ವೈದ್ಯರ ಮಗ.. - ಆನೇಕಲ್​ನಲ್ಲಿ ವೈದ್ಯನ ಮಗ ಮೃತ

ಕಳೆದ ತಿಂಗಳಿನಿಂದ ಬರೀ ಮೊಬೈಲನ್ನೇ ನೋಡುತ್ತಾ ಇರುತ್ತಿದ್ದ. ಹೀಗಾಗಿ ಮೊಬೈಲ್​ ಇಲ್ಲದೆ ಮನೆ ಬಿಟ್ಟು ಹೆಚ್ಚು ಆಚೆಗೆ ಸಹ ಬರುತ್ತಿರಲಿಲ್ಲ. ಫುಟ್ಬಾಲ್ ಆಟಗಾರನಾಗಿದ್ದ ಈತ ತಿಂಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಅಂತ ಗೆಳೆಯರು ತಿಳಿಸಿದ್ದಾರೆ.

Aditya Patil
ಆದಿತ್ಯ ಪಾಟೀಲ್​
author img

By

Published : Feb 8, 2022, 4:27 PM IST

Updated : Feb 8, 2022, 4:55 PM IST

ಆನೇಕಲ್ : ಇಲ್ಲಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡೀಸ್ ಬಡಾವಣೆಯ ಗಾರ್ಡನ್ ಅಪಾರ್ಟ್​ಮೆಂಟ್​ನ 5ನೇ ಕಟ್ಟಡದಿಂದ ಕೆಳಗೆ ಹಾರಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.

ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ ವೈದ್ಯರೊಬ್ಬರ ಮಗ..

ಬೇಗೂರು ಟ್ರಮೀಸ್ ಶಾಲೆಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಪಾಟೀಲ್​ ಮೃತಪಟ್ಟ ವಿದ್ಯಾರ್ಥಿ. ವೈದ್ಯ ಶರಣು ಪಾಟೀಲ್ ಮತ್ತು ಮಮತಾರ ಮುದ್ದಿನ ಏಕೈಕ ಮಗನಾಗಿದ್ದ.

ಶರಣು ಪಾಟೀಲ್​ ಮತ್ತು ಮಮತಾ ನಾರಾಯಣ ಹೆಲ್ತ್ ಸಿಟಿಯ ಸ್ಪರ್ಶ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞನಾಗಿದ್ದರು. ಕಳೆದ ತಿಂಗಳಿನಿಂದ ಮೊಬೈಲನ್ನೇ ನೋಡುತ್ತಾ ಇರುತ್ತಿದ್ದ. ಮೊಬೈಲ್​ ಇಲ್ಲದೆ ಮನೆ ಬಿಟ್ಟು ಹೆಚ್ಚು ಆಚೆಗೆ ಬರುತ್ತಿರಲಿಲ್ಲ. ಫುಟ್ಬಾಲ್ ಆಟಗಾರನಾಗಿದ್ದ ಆತ ತಿಂಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲವೆಂದು ಗೆಳೆಯರು ತಿಳಿಸಿದ್ದಾರೆ.

ಮನೆ ಮುಂದಿನ ಶರವಣ ಬಿಲ್ಡಿಂಗ್​ನ 5ನೇ ಅಂತಸ್ತಿನಿಂದ ಕೆಳಗೆ ಹಾರಿದ ಪರಿಣಾಮ ತಲೆ ಒಡೆದು ಮಿದುಳು ಹೊರಗೆ ಚಿಮ್ಮಿದ್ದು, ಸುತ್ತಲ ಅಪಾರ್ಟ್​ಮೆಂಟ್​ ವಾಸಿಗಳಿಗೆ ಗಾಬರಿ ಹುಟ್ಟಿಸಿದೆ.

ಕಳೆದ ಮೂರು ದಿನಗಳಿಂದ 10ನೇ ತರಗತಿಯ ಪರೀಕ್ಷೆ ನಡೆಯುತ್ತಿದೆ. ನಿನ್ನೆಯಷ್ಟೇ ಪರೀಕ್ಷೆಗೆ ಹಾಜರಾಗಿದ್ದ. ಇಂದು ಅರ್ಧ ಗಂಟೆಯಿಂದ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದ್ದರು. ಅಷ್ಟರಲ್ಲಿ ಮನೆ ಮುಂದಿನ ಎತ್ತರದ ಅಪಾರ್ಟ್​ಮೆಂಟ್​ ಕಟ್ಟಡದ ಮೇಲೆ ಹತ್ತಿ ಕೆಳಗೆ ಹಾರಿದ್ದಾನೆ. ಸ್ಥಳಕ್ಕೆ ಪೋಷಕರು ಹಾಗೂ ಡಿವೈಎಸ್​ಪಿ ಎಂ. ಮಲ್ಲೇಶ್ ಆಗಮಿಸಿದ್ದಾರೆ.

ಓದಿ: ರಾಜ್ಯದ 5 ಸಾವಿರ ಕಾಲೇಜುಗಳಲ್ಲಿ 12ರಲ್ಲಿ ಮಾತ್ರ ಹಿಜಾಬ್​ ಗಲಾಟೆ : ಸಚಿವ ನಾಗೇಶ್​

Last Updated : Feb 8, 2022, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.