ETV Bharat / state

ರಾಜ್ಯದಲ್ಲಿ ಕಾಂಗ್ರೆಸ್​ಗೆ ಸಿಕ್ಕಿದ್ದು ಒಂದೇ ಸ್ಥಾನ: ಡಿ ಕೆ ಸುರೇಶ್​ಗೆ ವಿಜಯ ಮಾಲೆ! - undefined

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಡಿ.ಕೆ.ಸುರೇಶ್ 2,06,870 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ಮೂರನೇ ಭಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಡಿ.ಕೆ. ಸುರೇಶ್
author img

By

Published : May 24, 2019, 2:52 AM IST

ರಾಮನಗರ: ಪ್ರತಿಷ್ಟೆಯ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾಂಗ್ರೆಸ್​ನ ಡಿ.ಕೆ. ಸುರೇಶ್​ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಡಿ.ಕೆ.ಸುರೇಶ್ 2,06,870 ಮತಗಳ ಅಂತರದಿಂದ ಗೆಲುವು ದಾಖಲಿಸಿ, ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಡಿ.ಕೆ.ಸುರೇಶ್ 8,78,258 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ 6,71,388 ಮತಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, 12,461 ನೋಟಾ ಮತಗಳ ದಾಖಲಾದ ಈ ಕ್ಷೇತ್ರ ನಾಲ್ಕನೇ ಸ್ಥಾನದಲ್ಲಿದೆ.

ಕಣದಲ್ಲಿದ್ದ ಬಿಎಸ್​ಪಿ ಅಭ್ಯರ್ಥಿ ಡಾ.ಚೆನ್ನಪ್ಪ ವೈ.ಚಿಕ್ಕಹಾಗಡೆ 19,972 ಮತ ಪಡೆದು ಮೂರನೇ ಸ್ಥಾನದಲ್ಲಿದ್ದು, ಅವರೂ ಸೇರಿದಂತೆ 13 ಮಂದಿ ಠೇವಣಿ ಕಳೆದು ಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಮುನ್ನಡೆ ಸಾಧಿಸಿದ್ದರೆ, ಉಳಿದ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ಕ್ಷೇತ್ರಗಳಲ್ಲಿ ಬಿಜೆಪಿ ದ್ವಿತೀಯ ಸ್ಥಾನ ಪಡೆದಿದ್ದರೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿಯೂ ಮುನ್ನಡೆ ಸಾಧಿಸುವಲ್ಲಿ ವಿಫಲಗೊಂಡಿದೆ.

ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 2,426 ಅಂಚೆ ಮತಗಳು ಸೇರಿ ಒಟ್ಟು 16,22,824 (ಶೇ. 64.90ರಷ್ಟು) ಮತಗಳು ಚಲಾವಣೆಯಾಗಿದ್ದವು.

ಯಾರಿಗೆ, ಎಷ್ಟು ಮತ?

  • ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಒಟ್ಟು 8,78, 158
  • ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ 6,71,388
  • ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಡಾ.ಚೆನ್ನಪ್ಪ ವೈ.ಚಿಕ್ಕಹಾಗಡೆ 19,872
  • ಪಿರಮಿಡ್ ಪಾರ್ಟಿ ಆಲ್ ಇಂಡಿಯಾ ಪಕ್ಷದ ಎನ್. ಕೃಷ್ಣಪ್ಪ 8123
  • ರಿಪಬ್ಲಿಕ್ ಸೇನೆಯ ಡಿ.ಎಂ.ಮಾದೇಗೌಡ 2,801
  • ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಮಂಜುನಾಥ್ 9889
  • ಎಸ್‌ಯುಸಿಐ (ಕಮ್ಯೂನಿಸ್ಟ್ ) ಟಿ.ಸಿ.ರಮಾ 2094
  • ರಿಪಬ್ಲಿಕ್ ಪಾರ್ಟಿ ಆಲ್ ಇಂಡಿಯಾ (ಎ)ದ ಡಾ.ಎಂ.ವೆಂಕಟಸ್ವಾಮಿ 1462,
  • ಸರ್ವ ಜನತಾ ಪಾರ್ಟಿಯ ವೆಂಕಟೇಶಪ್ಪ 2025

ಪಕ್ಷೇತರ ಅಭ್ಯರ್ಥಿಗಳಾದ ಈಶ್ವರ 923 , ಬಿ.ಗೋಪಾಲ್ 1859, ಎಚ್ .ಟಿ.ಚಿಕ್ಕರಾಜು 1363, ಎಂ.ಸಿ.ದೇವರಾಜು 2015, ಜೆ.ಟಿ.ಪ್ರಕಾಶ್ 47990, ರಘು ಜಾಣಗೆರೆ 2483 ಮತಗಳನ್ನು ಪಡೆದಿದ್ದಾರೆ. ಆದರೆ ಯಾರೋಬ್ಬರೂ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲರಾಗಿಲ್ಲ.

ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 1508 ಅಂಚೆ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ಕಾಂಗ್ರೆಸ್​ಗೆ 546 , ಬಿಜಿಪಿ 905 ಹಾಗೂ ಬಿಎಸ್ಪಿ ಪಕ್ಷಕ್ಕೆ 29 ಮತ ದೊರೆತಿವೆ. 12 ನೋಟಾ ಮತಗಳು ಚಲಾವಣೆಯಾಗಿವೆ.

ರಾಮನಗರ : ತೀವ್ರ ಕುತೂಹಲ ಹಾಗೂ ಪ್ರತಿಷ್ಠೆಯ ಕಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಏಕೈಕ ವಾರಸುದಾರನನ್ನ ಕರ್ನಾಟಕದಿಂದ ಪಡೆದುಕೊಂಡಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ೨,೦೬,೮೭೦ ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ಮೂರನೇ ಭಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಡಿ.ಕೆ.ಸುರೇಶ್ ೮,೭೮,೨೫೮ ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಅವರು ೬,೭೧,೩೮೮ ಮತಗಳನ್ನು ಪಡೆದುಕೊಂಡಿದ್ದಾರೆ. ನೋಟಾ ೧೨,೪೬೧ ಮತಗಳು ನಾಲ್ಕನೇ ಸ್ಥಾನದಲ್ಲಿರುವುದೇ ಈ ಭಾರಿಯ ಚುನಾವಣೆಯ ವಿಶೇಷಗಳಲ್ಲೊಂದು. ಇನ್ನು ಬಿಎಸ್ಪಿ ಅಭ್ಯರ್ಥಿ ಡಾ.ಚೆನ್ನಪ್ಪ ವೈ.ಚಿಕ್ಕಹಾಗಡೆ ೧೯,೯೭೨ ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು ಅವರೂ ಸೇರಿದಂತೆ ೧೩ ಮಂದಿ ಠೇವಣಿ ಕಳೆದು ಕೊಂಡಿದ್ದಾರೆ.ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಮುನ್ನಡೆ ಸಾಧಿಸಿದ್ದರೆ, ಉಳಿದ ೬ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಸ್ವ ಕ್ಷೇತ್ರ ಚನ್ನಪಟ್ಟಣದಲ್ಲಿಯೂ ಸಹ ಮುನ್ನಡೆ ಸಾಧಿಸುವಲ್ಲಿ ಬಿಜೆಪಿ ವಿಫಲಗೊಂಡಿದೆ. ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ೨,೪೨೬ ಅಂಚೆ ಮತಗಳು ಸೇರಿ ಒಟ್ಟು ೧೬,೨೨,೮೨೪ (ಶೇ.೬೪.೯೦ರಷ್ಟು) ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ೯೧೮ ಕುಲಗೆಟ್ಟ ಮತಗಳಾಗಿವೆ. ಯಾರ‍್ಯಾರು ಎಷ್ಟು ಮತ : ಡಿ.ಕೆ.ಸುರೇಶ್ ಒಟ್ಟು ೮,೭೮,೨೫೮ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ಅವರು ೬,೭೧,೩೮೮ ಮತಗಳನ್ನು ಗಳಿಸಿದ್ದಾರೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಡಾ.ಚೆನ್ನಪ್ಪ ವೈ.ಚಿಕ್ಕಹಾಗಡೆ ೧೯,೯೭೨ ಮತಗಳನ್ನು ಪಡೆದಿದ್ದರೆ, ಪಿರಮಿಡ್ ಪಾರ್ಟಿ ಆಲ್ ಇಂಡಿಯಾ ಪಕ್ಷದಿಂದ ಎನ್. ಕೃಷ್ಣಪ್ಪ ೮೧೨೩, ರಿಪಬ್ಲಿಕ್ ಸೇನೆಯಿಂದ ಡಿ.ಎಂ.ಮಾದೇಗೌಡ ೨೮೦೧, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಮಂಜುನಾಥ್ ೯೮೮೯, ಎಸ್‌ಯುಸಿಐ (ಕಮ್ಯೂನಿಸ್ಟ್ )ಟಿ.ಸಿ.ರಮಾ ೨೦೯೪, ರಿಪಬ್ಲಿಕ್ ಪಾರ್ಟಿ ಆಲ್ ಇಂಡಿಯಾ (ಎ)ದ ಡಾ.ಎಂ.ವೆಂಕಟಸ್ವಾಮಿ ೧೪೬೨, ಸರ್ವ ಜನತಾ ಪಾರ್ಟಿಯ ವೆಂಕಟೇಶಪ್ಪ ೨೦೨೫, ಪಕ್ಷೇತರರಾದ ಈಶ್ವರ ೯೨೩, ಬಿ.ಗೋಪಾಲ್ ೧೮೫೯, ಎಚ್ .ಟಿ.ಚಿಕ್ಕರಾಜು ೧೩೬೩, ಎಂ.ಸಿ.ದೇವರಾಜು ೨೦೧೫, ಜೆ.ಟಿ.ಪ್ರಕಾಶ್ ೪೭೯೦, ರಘು ಜಾಣಗೆರೆ ೨೪೮೩ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯಾರೋಬ್ಬರೂ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ೧೫೦೮ ಅಂಚೆ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಗೆ ೫೪೬ , ಬಿಜಿಪಿ ೯೦೫ ಹಾಗೂ ಬಿಎಸ್ಪಿ ಪಕ್ಷಕ್ಕೆ ೨೯ , ನೋಟಾಗೆ ೧೨ ಮತಗಳು ಚಲಾವಣೆಯಾಗಿವೆ. ಮೂರನೇ ಬಾರಿ ಲೋಕ ಚುನಾವಣೆ ಕಣಕ್ಕಿಳಿದಿದ್ದ ಡಿ.ಕೆ.ಸುರೇಶ್ ಅವರು, ೨೦೧೩ರಲ್ಲಿ ನಡೆದಿದ್ದ ಲೋಕಸಭೆ ಉಪ ಚುನಾವಣೆಯಲ್ಲಿ ತಮ್ಮ ಸಮೀಪದ ಅಭ್ಯರ್ಥಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಸುಮಾರು ೧.೩೭ ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಆ ಚುನಾವಣೆಯಲ್ಲಿ ಸುರೇಶ್ ಅವರು ಒಟ್ಟು ೫,೭೮,೬೦೮ ಮತಗಳನ್ನು ಪಡೆದಿದ್ದರೆ, ಅನಿತಾ ಕುಮಾರಸ್ವಾಮಿ ಅವರು ೪,೪೧,೬೦೧ ಮತಗಳನ್ನಷ್ಟೇ ಗಳಿಸಲು ಸಾಧ್ಯವಾಗಿತ್ತು. ಮೊದಲ ಸುತ್ತಲ್ಲೇ ಮುನ್ನಡೆ ಒಟ್ಟು ೨೭ ಸುತ್ತುಗಳಲ್ಲಿ ನಡೆದ ಈ ಮತ ಎಣಿಕೆಯ ಆರಂಭದ ಸುತ್ತಿನಿಂದಲೇ ಡಿ.ಕೆ.ಸುರೇಶ್ ೩,೬೪೬ ಮತಗಳ ಮುನ್ನಡೆ ಸಾಧಿಸಿದರು. ಪ್ರತಿ ಹಂತದಲ್ಲೂ ಮತ ಗಳಿಸುವಲ್ಲಿ ಯಶಸ್ವಿಯಾಗಿ ಒಮ್ಮೆಯೂ ತಿರುಗಿ ನೋಡಲಿಲ್ಲ. ಮೂರನೇ ಸುತ್ತಿನಲ್ಲಿ ೧೨,೪೩೦ ಮತಗಳೊಂದಿಗೆ ಮುಂದಿದ್ದ ಡಿ.ಕೆ.ಸುರೇಶ್ ಅವರು ನಾಲ್ಕನೇ ಸುತ್ತಿನ ವೇಳೆಗೆ ೩,೯೪೧ ಮತಗಳ ಅಂತರಕ್ಕೆ ಬಂದಿತು. ಐದನೇ ಸುತ್ತಿಗೆ ೨,೧೭೩ ಮತಗಳಿಗೆ ಬಂದಾಗ ಕಾಂಗ್ರೆಸ್ಸಿಗರಲ್ಲಿ ಆತಂಕಕ್ಕೆ ಒಳಗಾದರು. ೮ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿಗಿಂತ ೧೭,೨೫೧ ಮತಗಳ ಅಂತರ ಕಾಯ್ದುಕೊಂಡರು. ಹಾಗೆಯೇ ಪ್ರತಿ ಹಂತದಲ್ಲೂ ಹೆಚ್ಚು ಮತ ಗಳಿಸುವಲ್ಲಿ ಸಫಲರಾಗಿದ್ದಲ್ಲದೆ ಅಂತಿಮ ಸುತ್ತಿನವರೆವಿಗೂ ಮುನ್ನಡೆ ಕಾಯ್ದುಕೊಂಡೇ ಜಯಭೇರಿ ಭಾರಿಸಿದರು. ಕನಕಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಮಾರು ೧,೪೦,೪೯೦ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಗಿಂತ ಸುಮಾರು ೧,೦೭,೫೬೬ ಮತಗಳನ್ನು ಪಡೆದಿದ್ದಾರೆ. ಮಾಗಡಿ ಕ್ಷೇತ್ರದಲ್ಲಿ ಬಿಜೆಪಿ ೬೫ ಸಾವಿರ ಮತಗಳನ್ನು ಮಾತ್ರ ಪಡೆದಿದ್ದರೆ, ಕಾಂಗ್ರೆಸ್ ಸುಮಾರು ೩೫ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದೆ. ಬಿಜೆಪಿಯ ಭದ್ರಕೋಟೆ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಪಕ್ಷವು ಕಾಂಗ್ರೆಸ್ ಗಿಂತ ೪೯ ಸಾವಿರ, ರಾಜರಾಜೇಶ್ವರಿ ಕ್ಷೇತ್ರದಲ್ಲಿ ೨೭,೭೨೦ ಮತಗಳ ಮುನ್ನಡೆ ಸಾಧಿಸಿದೆ. ಉಳಿದಂತೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಮತ್ತು ಕುಣಿಗಲ್ ಹಾಗೂ ಆನೇಕಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.