ETV Bharat / state

ಹೊಸಕೋಟೆ ಕಾಂಗ್ರೆಸ್​ನಲ್ಲಿ ಮತ್ತೆ ಭಿನ್ನಮತ: ಶಾಸಕ ಶರತ್ ಬಚ್ಚೇಗೌಡ ವಿರುದ್ದ‌‌‌ ಸಿಡಿದೆದ್ದ ಕಾರ್ಯಕರ್ತರು

ಈ ಬಾರಿ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಟಿಕೆಟ್​ ನೀಡುವ ಬದಲಾಗಿ ಜಿಪಂ ಮಾಜಿ ಅಧ್ಯಕ್ಷ ಪ್ರಸಾದ್​ ಅಥವಾ ಮುನಿಶಾಮಣ್ಣ ಅವರಿಗೆ ಟಿಕೆಟ್​ ನೀಡುವಂತೆ ಮುಖಂಡರು ಒತ್ತಾಯ ಮಾಡಿದ್ದಾರೆ.

Dissent again in Hoskote Congress
ಹೊಸಕೋಟೆ ಕಾಂಗ್ರೆಸ್​ನಲ್ಲಿ ಮತ್ತೆ ಭಿನ್ನಮತ
author img

By

Published : Dec 9, 2022, 1:16 PM IST

ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಮತ್ತೆ ತಾಲೂಕಿನ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.‌ ಶಾಸಕ ಶರತ್ ಬಚ್ಚೇಗೌಡ ವಿರುದ್ದ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದಾರೆ. ಕಾಂಗ್ರೆಸ್​ ನಾಯಕರನ್ನು ಬಿಟ್ಟು ಶಾಸಕ ಶರತ್​ ಅನುಗೊಂಡನಹಳ್ಳಿ ಹೋಬಳಿಯಲ್ಲಿರುವ ಕಾಂಗ್ರೆಸ್​ ಕಚೇರಿಯನ್ನು ಉದ್ಘಾಟಿಸಿರುವುದು ಈ ಗಲಾಟೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

ಅದರ ಜೊತೆಗೆ ಹೊಸಕೋಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೂಲ ಕಾಂಗ್ರೆಸ್ಸಿಗರ ಸಭೆಯಲ್ಲಿ ಈ ಬಾರಿ ಶರತ್​ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು. ಬದಲಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಸಾದ್​ ಅಥವಾ ಮುನಿ ಶಾಮಣ್ಣ ಅವರಿಗೆ ಟಿಕೆಟ್​ ನೀಡುವಂತೆ ಮುಖಂಡರು ಒತ್ತಾಯ ಮಾಡಿದ್ದಾರೆ.

ಸಭೆಯಲ್ಲಿ ಪರಸ್ಪರ ಮೂಲ ಕಾಂಗ್ರೆಸ್ಸಿಗರು ಕಿತ್ತಾಡಿಕೊಂಡಿದ್ದು, ಗದ್ದಲ ಹೆಚ್ಚಾಗಿದೆ. ಇದರ ಜೊತೆಗೆ ಶಾಸಕ‌ ಶರತ್ ಮೂಲ ಕಾಂಗ್ರೆಸ್​ ನಾಯಕರನ್ನು ಕಡೆಗಣಿಸಿ ತನ್ನ ಬೆಂಬಲಿಗರಿಗೆ ಮನ್ನಣೆ ನೀಡುತ್ತಿರುವ ಆರೋಪವೂ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಈ ವಿಚಾರವಾಗಿಯೂ ಗಲಾಟೆ ಗದ್ದಲವಾಗಿದೆ. ಜತೆಗೆ ಕಾಂಗ್ರೆಸ್​​ನ ಕೆಲ ಕಾರ್ಯಕರ್ತರು ಕೆಪಿಸಿಸಿ ರಾಜ್ಯ ‌ಕಾರ್ಯದರ್ಶಿ ಮುನಿಶಾಮಣ್ಣ ವಿರುದ್ದ ಆಕ್ರೋಶ ಹೋರಹಾಕಿದ್ದಾರೆ. ಗದ್ದಲ ಕುರ್ಚಿ ಮೇಲಕ್ಕೆತ್ತಿ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿತ್ತು.

ಕ್ಷೇತ್ರದಲ್ಲಿ ಕಾಂಗ್ರೆಸ್​ ಕಟ್ಟಿ ಬೆಳೆಸಿದವರನ್ನು ಗುರುತಿಸುವಂತೆ ಕಾಂಗ್ರೆಸ್ ಮೂಲಿಗರು ಒತ್ತಾಯ ಮಾಡಿದ್ದು, ಹೊಸಕೋಟೆ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಇದೀಗ ಈ ಭಿನ್ನಮತ ಕಾಂಗ್ರೆಸ್​ನ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದ್ದು, ರಾಜ್ಯ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು‌ ನೋಡಬೇಕಿದೆ.

ಇದನ್ನೂ ಓದಿ: ಮುಂಡರಗಿ ಪುರಸಭೆಯಲ್ಲಿ ಜಟಾಪಟಿ: ಕುರ್ಚಿ ಎಸೆದು ಕಾಂಗ್ರೆಸ್​ ಸದಸ್ಯನ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.