ಬೆಂಗಳೂರು: ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾಟ್ಗೆ ಎಂಎಲ್ಸಿ ಶರವಣ ಆಗಮಿಸಿದ್ದು, ಸಿಎಂ ಕುಮಾರಸ್ವಾಮಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರೆಸಾರ್ಟ್ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ. ಸಭೆಗೆ ಎಲ್ಲಾ ಜೆಡಿಎಸ್ ಶಾಸಕರು ಆಗಮಿಸಲಿದ್ದಾರೆ ಎಂದರು.