ಆನೇಕಲ್: ದ್ರೌಪತಮ್ಮ ದೇವಿ ಜನ್ಮಾಷ್ಠಮಿ ನಿಮಿತ್ತ ಪ್ರವಾಹದಿಂದ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರು ಆದಷ್ಟು ಬೇಗ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಂತಾಗಲಿ ಎಂದು ದೇವಿಯ ಭಕ್ತರು ಮೆರವಣಿಗೆ ನಡೆಸಿದರು.
ಹೌದು, ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ವಹ್ನಿಕುಲ ಸಮುದಾಯದವರ ಆರಾಧ್ಯ ದೈವ ದ್ರೌಪತಮ್ಮ ದೇವಿಯ ಜನ್ಮಾಷ್ಠಮಿಯನ್ನು ವಿನೂತನವಾಗಿ ಆಚರಣೆ ಮಾಡಿದರು. ಈ ವೇಳೆ, ಅವರು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಅಂತಹ ಕುಟುಂಬಗಳು ಮತ್ತೆ ಸಹಜ ಸ್ಥಿತಿಯತ್ತ ಮರಳಿ ಜೀವನ ನಡೆಸುವಾಂತಾಗಲಿ ಎಂದು ವಹ್ನಿಕುಲದ ನೂರಾರು ಜನರು ಈ ಉತ್ಸವ ನೆರವೇರಿಸಿದರು.
ಭಕ್ತಾದಿಗಳು ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅರಿಶಿನದ ನೀರಿನ್ನು ಹೊತ್ತು ದ್ರೌಪತಮ್ಮ ದೇವಿಯ ಮೆರೆವಣಿಗೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದರು.