ದೇವನಹಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಅಯೋಧ್ಯೆಯತ್ತ ಹೊರಟ ಕಲ್ಲುಗಳನ್ನ ಹೊತ್ತ ಲಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಸಿರು ನಿಶಾನೆ ತೋರಿಸಿದರು.
ದೇವಾಲಯ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಾದ ವಿವಾದಗಳ ಬಳಿಕ, ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ಕೊಟ್ಟಿತು. ಆ ನಂತರ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಮಮಂದಿರ ಮಂದಿರದ ತಳಪಾಯಕ್ಕೆ ದೇವನಹಳ್ಳಿಯ ಸಾದಹಳ್ಳಿಯ ಸ್ವಾಮಿ ವಿವೇಕಾನಂದ ಮತ್ತು ಹನುಮಾನ್ ಗ್ರಾನೈಟ್ನಿಂದ 10 ಸಾವಿರ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಕಲ್ಲುಗಳನ್ನ ಹೊತ್ತ 5 ಲಾರಿಗಳು ಇಂದು ಅಯ್ಯೋಧೆಯತ್ತ ಸಾಗಿವೆ. ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಭಾಗವಹಿಸಿದ್ದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ತಳಭಾಗ ಉಸುಕು ಮಣ್ಣಿನಿಂದ ಕೂಡಿದು, ಈ ಉಸುಕು ಮಣ್ಣನ್ನು ತೆಗೆದು ನೆಲವನ್ನು ಗಟ್ಟಿಗೊಳಿಸದ ನಂತರ ಸುಭದ್ರವಾದ ದೇವಾಲಯ ನಿರ್ಮಾಣ ಮಾಡಲಾಗುತ್ತದೆ. ತಳಭಾಗವನ್ನ ಗಟ್ಟಿ ಮಾಡುವ ಕಾರಣಕ್ಕೆ ಸಾದಹಳ್ಳಿಯಿಂದ ಕಲ್ಲುಗಳನ್ನು ರವಾನೆ ಮಾಡಲಾಗುತ್ತಿದೆ.