ದೊಡ್ಡಬಳ್ಳಾಪುರ: ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ರಾಜಕೀಯ ದ್ವೇಷಕ್ಕೆ 3 ಎಕರೆಯಲ್ಲಿ ಬೆಳೆದಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಟೊಮಾಟೊ ಬೆಳೆಯನ್ನು ನಾಶ ಮಾಡಿರುವ ಆರೋಪ ಕೇಳಿಬಂದಿದೆ.
"ಕುದುರೆಗೆರೆ ಗ್ರಾಮದಲ್ಲಿನ ನಮ್ಮ 3 ಎಕರೆ 10 ಗುಂಟೆ ಜಾಗದಲ್ಲಿ ಟೊಮಾಟೊ ಬೆಳೆದಿದ್ದೆ. ಫಸಲಿಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದೆ. ಆದರೆ, ನಿನ್ನೆ ರಾತ್ರಿ 2 ಗಂಟೆಯ ಸಮಯದಲ್ಲಿ ಹೊಲಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 20 ಲಕ್ಷ ಮೌಲ್ಯದ ಬೆಳೆಯನ್ನು ನಾಶ ಮಾಡಿದ್ದಾರೆ." ಎಂದು ರೈತ ಅಶ್ವತ್ಥ್ ನಾರಾಯಣ್ ತಮ್ಮ ನೋವು ತೋಡಿಕೊಂಡರು.
ಓದಿ: 2023ರ ಸಾರ್ವತ್ರಿಕ ಚುನಾವಣೆ ಸ್ವತಂತ್ರವಾಗಿ ಎದುರಿಸುತ್ತೇವೆ: ಕುಮಾರಸ್ವಾಮಿ
ಕಾರನಾಳ ಗ್ರಾಮದ ಗಂಗಾಧರ್ ಎನ್ನುವ ವ್ಯಕ್ತಿ ರಾಜಕೀಯ ದ್ವೇಷದಿಂದ ತಮ್ಮ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಆರೋಪ ಮಾಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.