ಆನೇಕಲ್ (ಬೆಂಗಳೂರು): ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಆಸ್ಪತ್ರೆಯ ನೆಲದ ಮೇಲೆ ಹಾಗೆಯೆ ಬಿಟ್ಟು ನಿರ್ಲಕ್ಷ್ಯ ತೋರಿರುವ ಘಟನೆ ನಡೆದಿದೆ. ಅತ್ತಿಬೆಲೆ-ಯಡವನಹಳ್ಳಿ ಗೇಟ್ ಬಳಿ ಇರುವ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇನ್ನೊಂದು ಬೆಡ್ನಲ್ಲಿದ್ದ ರೋಗಿಯೊಬ್ಬರು ವಿಡಿಯೋ ಮಾಡಿದ್ದಾರೆ.
ಇಂದು ಬೆಳಗ್ಗೆ ಕೋವಿಡ್ನಿಂದ ಮೃತಪಟ್ಟಿದ್ದಾನೆ. ಆದರೆ ಇದಕ್ಕೂ ಮೊದಲು ಆತ ಹಾಸಿಗೆಯಿಂದ ಕೆಳಗೆ ನೆಲದ ಮೇಲೆ ಬಿದ್ದಿದ್ದಾನೆ. ಆ ವೇಳೆಯಲ್ಲೂ ಯಾರೊಬ್ಬರೂ ಆತನ ಸಹಾಯಕ್ಕೆ ಬಂದಿಲ್ಲ. ಬಳಿಕ ಆತ ಮೃತಪಟ್ಟಿದ್ದಾನೆ. ಆದರೂ ಸುಮಾರು 4-5ಗಂಟೆ ಶವ ನೆಲದ ಮೇಲೆ ಇಟ್ಟಿದ್ದಾರೆ.
ಬಳಿಕ ಸಿಬ್ಬಂದಿ ಆಗಮಿಸಿ ಉಳಿದ ರೋಗಿಗಳಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯಕ್ಕೆ ಉಳಿದ ರೋಗಿಗಳು ನರಕಯಾತನೆ ಪಡುವ ಸ್ಥಿತಿ ಎದುರಾಗಿದೆ.