ETV Bharat / state

ದಲಿತರಿಂದ ದೇವಾಲಯ ಪ್ರವೇಶ, ಸವರ್ಣಿಯರಿಂದ ಸ್ವಾಗತ- ಈಟಿವಿ ಭಾರತ ಇಂಪ್ಯಾಕ್ಟ್ - ಚನ್ನಕೇಶವ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಕರಣೆ ಹಿನ್ನೆಲೆ

ದೊಡ್ಡಬಳ್ಳಾಪುರ ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಈ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕಿನ ತಹಶೀಲ್ದಾರ್​​ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇಂದು ದೇವಾಸ್ಥಾನಕ್ಕೆ ದಲಿತರ ಪ್ರವೇಶಿಸುವ ಮೂಲಕ ಗ್ರಾಮದಲ್ಲಿದ್ದ ಅಸ್ಪೃಶ್ಯತೆಯನ್ನು ತೊಲಗಿಸಿದ್ದಾರೆ.

Dalith people entered Channakeshav Temple
ದಲಿತರಿಂದ ದೇವಾಲಯ ಪ್ರವೇಶ, ಸವರ್ಣಿಯರಿಂದ ಸ್ವಾಗತ
author img

By

Published : Jul 30, 2021, 12:13 AM IST

ದೊಡ್ಡಬಳ್ಳಾಪುರ: ತಾಲೂಕಿನ ಕುರುವಿಗೆರೆ ಗ್ರಾಮದಲ್ಲಿ ಇನ್ನೂ ಅಸ್ಪೃಶ್ಯತೆ ಆಚರಣೆ ಜಾರಿಯಲ್ಲಿತ್ತು. ಈ ಕುರಿತು ಈಟಿವಿ ಭಾರತ ಬುಧವಾರ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ದಲಿತರು ಮತ್ತು ಸವರ್ಣೀಯರ ನಡುವೆ ಮಾತುಕತೆ ನಡೆಸಿ ದಲಿತರಿಂದ ದೇವಸ್ಥಾನ ಪ್ರವೇಶ ಮಾಡಿಸಿದ್ದಾರೆ. ಇದನ್ನು ಸವರ್ಣೀಯರು ಕೂಡ ಸ್ವಾಗತಿಸಿದರು.

ಕುರುವಿಗೆರೆ ಗ್ರಾಮದಲ್ಲಿ 40 ದಲಿತ ಕುಟುಂಬಗಳು ಮತ್ತು 40 ಸವರ್ಣೀಯರ ಕುಟುಂಬಗಳಿವೆ. ಗ್ರಾಮದಲ್ಲಿ ಚನ್ನಕೇಶವ ದೇವಸ್ಥಾನ ಇದ್ದು, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ದೇವರ ಮೆರವಣಿಗೆ ದಲಿತ ಕೇರಿಗೆ ಬರುತ್ತಿರಲಿಲ್ಲ. ಇದರ ಜೊತೆಗೆ ಟ್ಯಾಂಕರ್ ನೀರು ಹಿಡಿಯುವಾಗ ದಲಿತರನ್ನು ಸವರ್ಣೀಯರು ತಡೆಯುತ್ತಿದ್ದರು. ಇದರಿಂದ ಮಾನಸಿಕ ಹಿಂಸೆ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿದ್ದ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕುರಿತು ಈಟಿವಿ ಭಾರತ ವರದಿ ಸಹ ಮಾಡಿತ್ತು. ವರದಿಯಿಂದ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ದಲಿತ ಮತ್ತು ಸವರ್ಣೀಯರ ಮುಖಂಡರ ಜೊತೆ ಚರ್ಚಿಸಿ ಅಸ್ಪೃಶ್ಯತೆ ಆಚರಣೆ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು. ತಹಶೀಲ್ದಾರ್‌ ಸಮ್ಮುಖದಲ್ಲಿ ದಲಿತರು ದೇವಾಲಯ ಒಳಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಗ್ರಾಮದ ಸವರ್ಣೀಯರು ಕೂಡ ದಲಿತರಿಗೆ ದೇವಾಲಯದೊಳಗೆ ಮುಕ್ತ ಆಹ್ವಾನ ನೀಡಿದರು.

ದಲಿತರಿಂದ ದೇವಾಲಯ ಪ್ರವೇಶ, ಸವರ್ಣಿಯರಿಂದ ಸ್ವಾಗತ

ದಲಿತರ ದೇವಾಲಯ ಪ್ರವೇಶ ಮುಗಿದ ಬಳಿಕ ತಹಶೀಲ್ದಾರ್‌ ಟಿ.ಶಿವರಾಜ್ ಮಾತನಾಡಿ, ಈ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಎಂದು ಬೋರ್ಡ್‌ ಹಾಕಿಸಬೇಕು. ಜೊತೆಗೆ ಗ್ರಾಮದಲ್ಲಿ ಸಾರ್ವಜನಿಕ ನೀರಿನ ಕೊಳಾಯಿ ಬಳಿ ಕೂಡ ಯಾವುದೇ ಬೇಧ-ಭಾವ ಮಾಡಬಾರದು. ಈ ರೀತಿ ಕಂಡು ಬಂದರೆ ವಾಟರ್‌ ಮ್ಯಾನ್‌ ಕೂಡಲೇ ಪಂಚಾಯಿತಿ ಪಿಡಿಒಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.

ಗ್ರಾಮದ ಹಿರಿಯ ಜಿಲ್ಲಾಪಂಚಾಯತ್‌ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿ, ನಮ್ಮ ಗ್ರಾಮದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಜನರು ಜೀವನ ನಡೆಸುತ್ತಿದ್ದಾರೆ. ಎಂದೂ ಜಾತಿಗಳ ನಡುವೆ ವೈಷಮ್ಯ ಬಂದಿರಲಿಲ್ಲ. ಆದರೆ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಮುನಿರಾಜು ಸೇರಿದಂತೆ ಕೆಲವರ ವೈಯಕ್ತಿಕ ಪ್ರತಿಷ್ಠೆ, ವೈಷಮ್ಯದಿಂದ ಇಂತಹದ್ದೊಂದು ವಿವಾದ ಸೃಷ್ಟಿಯಾಗಿದ್ದು, ದುರದೃಷ್ಟಕರ ಸಂಗತಿಯಾಗಿದೆ. ದೇವಾಲಯ ಪ್ರವೇಶ ಕೇಳಿದರೂ ಮುಕ್ತವಾಗಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು.

ಇದನ್ನೂ ಓದಿ: ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ... ದೇವಸ್ಥಾನಕ್ಕೆ ಪ್ರವೇಶವಿಲ್ಲ, ದಲಿತ ಕೇರಿಗೆ ದೇವರ ಮೆರವಣಿಗೆ ಬರಲ್ಲ!

ದಲಿತ ಮುಖಂಡ ಮುನಿರಾಜು ನಂತರ ಮಾತನಾಡಿ, ಸಂವಿಧಾನ ಕೊಟ್ಟ ಅಧಿಕಾರ ಮತ್ತು ಕಾನೂನಿನ ಚೌಕಟ್ಟಿನಲ್ಲಿ ದೇವಾಲಯ ಪ್ರವೇಶ ಮಾಡಿದ್ದೇವೆ. ಇವತ್ತಿನ ಸವರ್ಣೀಯರ ಯುವಕರ ದ್ವೇಷದಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗಿತ್ತು. ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯವಾಗಿದೆ. ಮುಂದೆ ಶಾಂತಿಯುತವಾಗಿ ಎಲ್ಲರೂ ಸಾಮರಸ್ಯದಿಂದ ಬದುಕುವುದಾಗಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.