ETV Bharat / state

Lovers Suicide: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ಪ್ರೇಮಿಗಳು - ಈಟಿವಿ ಭಾರತ ಕನ್ನಡ

ಪಶ್ಚಿಮ ಬಂಗಾಳ ಮೂಲದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ.

Lovers Suicide
ಬೆಂಗಳೂರು
author img

By

Published : Jun 18, 2023, 1:11 PM IST

Updated : Jun 18, 2023, 2:03 PM IST

ಬೆಂಗಳೂರು: ತಪ್ಪು ಗ್ರಹಿಕೆಯಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರದ ಬೆಳ್ಳಂದೂರಿನಲ್ಲಿ ನಡೆದಿದೆ. ಪ್ರೀತಿಸಿದವಳಿಗೆ ಬೇರೆ ಮದುವೆ ನಿಶ್ಚಯವಾಗಿದೆ ಎಂದು ಭಾವಿಸಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯಕರನ ಆತ್ಮಹತ್ಯೆ ವಿಚಾರ ತಿಳಿದು ಪ್ರಿಯತಮೆಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಬಿಪೇಂದ್ರ ಕುಮಾರ್‌ (21) ಹಾಗೂ ಸಂಶುಕಾ ಧಾರಾ (21) ಮೃತ ದುರ್ದೈವಿಗಳು. ಗುರುವಾರ ಮಧ್ಯಾಹ್ನ ಬಿಪೇಂದ್ರ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದರೆ, ಮರುದಿನ ಈ ವಿಷಯ ತಿಳಿದ ಸಂಶುಕಾ ಧಾರಾ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಫೋನ್​ಗಳನ್ನು ಪರಿಶೀಲಿಸಿದಾಗ ಸಿಕ್ಕ ಫೋಟೋಗಳಿಂದ ಇವರಿಬ್ಬರು ಪ್ರೇಮಿಗಳು ಎಂದು ತಿಳಿದುಬಂದಿರುವುದಾಗಿ ಮಾರತ್ತಹಳ್ಳಿ ಪೊಲೀಸರು ತಿಳಿಸಿದ್ದಾರೆ. ​

ಬಿಪೇಂದ್ರ ಕುಮಾರ್​ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಧಾರಾ ಸಹ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಧಾರಾ ತೆರಳಿದ್ದಾಗ ಪೋಷಕರು ಆಕೆಗೆ ಬೇರೊಂದು ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಸಿದ್ದರು. ವಿಷಯ ತಿಳಿದ ಬಿಪೇಂದ್ರ ಕುಮಾರ್ ಸ್ನೇಹಿತರಿಗೆ ಗುಡ್ ಬೈ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ಪ್ರಿಯಕರನ ಆತ್ಮಹತ್ಯೆ ವಿಚಾರ ತಿಳಿದು ನೊಂದ ಧಾರಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನು ಕಂಡ ಜನರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಕೆ ಶನಿವಾರ ಬೆಳಿಗ್ಗೆ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮಾರತ್ತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಹೆಡ್‌ಕಾನ್ಸ್‌ಟೇಬಲ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು, CPI, PSI, ಕಾನ್ಸ್‌ಟೇಬಲ್‌ ಅಮಾನತು

ಪ್ರೀತಿಸುವಂತೆ ಕಾಟ, ವಿದ್ಯಾರ್ಥಿನಿ ಆತ್ಮಹತ್ಯೆ: ಶಾಲೆಗೆ ಹೋಗುವಾಗ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ವರ್ತನೆಗೆ ಬೇಸತ್ತು, ಮನೆಯವರು ಶಾಲೆಯಿಂದ ಬಿಡಿಸಿದಾಗ ಮನನೊಂದ 10ನೇಯ ತರಗತಿಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಲವು ದಿನಗಳ ಹಿಂದೆ ಮೈಸೂರಿನ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿತ್ತು.

ಘಟನೆಯ ವಿವರ: ಮೃತ ವಿದ್ಯಾರ್ಥಿನಿ ಸರ್ಕಾರಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತನ್ನ ಗ್ರಾಮದಿಂದ ಶಾಲೆಗೆ ಬರುವಾಗ ಅದೇ ಗ್ರಾಮದ ಶರತ್​ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಈ ವಿಚಾರವನ್ನು ವಿದ್ಯಾರ್ಥಿನಿಯು ತಂದೆಯ ಬಳಿ ಹೇಳಿದಾಗ ಅವರು ಯುವಕನನ್ನು ಕರೆದು ಬುದ್ದಿವಾದ ಹೇಳಿದ್ದರಂತೆ. ಆದರೂ ಯುವಕ ಶರತ್ ತನ್ನ ವರ್ತನೆಯನ್ನು ಮುಂದುವರೆಸಿದಾಗ, ವಿದ್ಯಾರ್ಥಿನಿಯ ಮನೆಯವರು ಆಕೆಯನ್ನು ಶಾಲೆ ಬಿಡಿಸಿ ಮನೆಯಲ್ಲೇ ಉಳಿಸಿಕೊಂಡಿದ್ದರಂತೆ. ಯುವಕನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಯಿತು ಎಂದು ಮನನೊಂದ ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ನಂಜನಗೂಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Anekal Crime: ನಿವೇಶನ ನೀಡುವ ನೆಪದಲ್ಲಿ ನೂರಾರು ಮಂದಿಗೆ ನಾಮ ಹಾಕಿದ ಗ್ರಾಮ ಪಂಚಾಯತ್​ ಸದಸ್ಯ ಬಂಧನ

Last Updated : Jun 18, 2023, 2:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.