ETV Bharat / state

ಕೋವಿಡ್​ ಹಿನ್ನೆಲೆ: ಕೆಂಪೇಗೌಡ ಏರ್ಪೋಟ್​ನಲ್ಲಿ ಡಿಹೆಚ್ಒ ಪರಿಶೀಲನೆ

ಕೊರೊನಾ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಹೆಚ್​ಒ ಪರಿಶೀಲನೆ ನಡೆಸಿದ್ದಾರೆ.

Bangalore Rural DHO Vijayendra
ಬೆಂಗಳೂರು ಗ್ರಾಮಾಂತರ ಡಿಹೆಚ್​ಓ ವಿಜಯೇಂದ್ರ
author img

By

Published : Dec 24, 2022, 12:36 PM IST

Updated : Dec 24, 2022, 12:55 PM IST

ಬೆಂಗಳೂರು ಗ್ರಾಮಾಂತರ ಡಿಹೆಚ್​ಒ ವಿಜಯೇಂದ್ರ

ದೇವನಹಳ್ಳಿ(ಬೆಂ.ಗ್ರಾ): ಕೊರೊನಾ ಹೊಸತಳಿಯ ಆತಂಕದ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಡಿಹೆಚ್​ಒ ವಿಜಯೇಂದ್ರ ತಿಳಿಸಿದರು.

ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೊನಾ ತಡೆಗಟ್ಟಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂಬ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ, ನಿತ್ಯ ವಿದೇಶಗಳಿಂದ ಬರುವವರಲ್ಲಿ ಶೇ2ರಷ್ಟು ಪ್ರಯಾಣಿಕರನ್ನು ಟೆಸ್ಟಿಂಗ್​ಗೆ ಒಳಪಡಿಸಲಾಗುತ್ತಿದ್ದು, 100 ರಿಂದ 150 ಜನರ ಸ್ಯಾಂಪಲ್ ತೆಗೆಯಲಾಗುತ್ತಿದೆ ಎಂದರು.

ಅಲ್ಲದೇ ಕಳೆದ ನವೆಂಬರ್​ನಲ್ಲಿ 7 ಜನರಲ್ಲಿ ಮತ್ತು ಈ‌ ತಿಂಗಳು ಬೆಂಗಳೂರಿಗೆ ಬಂದ 8 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಅವರ ಸ್ಯಾಂಪಲ್ ಪಡೆದು ಜಿನೋಟಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. ಪಾಸಿಟಿವ್ ಬಂದವರ ವಿಳಾಸ ಪೋನ್ ನಂಬರ್ ಪಡೆದುಕೊಂಡು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇನ್ನು ಟ್ರೇಸಿಂಗ್ ಟೆಸ್ಟಿಂಗ್ ಹೆಚ್ಚಳ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಏರ್ಪೋಟ್​ಗೆ ಬರುವ ಪ್ರಯಾಣಿಕರ ಮೇಲೆ ಮತ್ತಷ್ಟು ನಿಗಾ ಇಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋವಿಡ್ ಮಾರ್ಗಸೂಚಿ ಪ್ರಕಟ: ಇಂದಿನಿಂದ ಜಾರಿ

Last Updated : Dec 24, 2022, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.