ದೊಡ್ಡಬಳ್ಳಾಪುರ(ಬೆ. ಗ್ರಾಮಾಂತರ): ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ದಂಪತಿ(couple dead in road accident) ಗಾರೆ ಕೆಲಸಕ್ಕೆಂದು ಬೈಕ್ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದೊಡ್ಡಬಳ್ಳಾಪುರ(accident near Doddaballapura) ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ದಂಪತಿ ಶ್ಯಾಮನಾಯಕ್(65) ಮತ್ತು ಶಾರದಮ್ಮ(58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ದೊಡ್ಡಬೆಳವಂಗಲ ನಿವಾಸಿಗಳಾಗಿದ್ದು, ದಾಬಸ್ ಪೇಟೆಗೆ ಗಾರೆ ಕೆಲಸಕ್ಕೆಂದು ಬೈಕ್ನಲ್ಲಿ ಹೊರಟಿದ್ದರು.
ಕತ್ತಿಹೊಸಹಳ್ಳಿ ಗ್ರಾಮದ ಬಳಿ ದಂಪತಿ ಬೈಕ್ ಮೇಲೆ ಲಾರಿ ಹರಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ(Doddabelavangala police station) ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Watch video: ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಯುವತಿಯರಿಗೆ ಗುದ್ದಿದ ಆಟೋ