ETV Bharat / state

ಕೊರೊನಾ ವೈರಸ್ ಭೀತಿ: ದೊಡ್ಡಬಳ್ಳಾಪುರದಲ್ಲಿ ಕೆಎಸ್ಆರ್​​ಟಿಸಿ ಬಸ್​ಗಳ ಸ್ವಚ್ಛತೆ - 100 ಕ್ಕೂ ಹೆಚ್ಚು ಬಸ್ ಗಳು ರಾಜಧಾನಿ ಬೆಂಗಳೂರು  ರೂಟ್​​ನಲ್ಲಿ ಸಂಚಾರ

ರಾಜ್ಯದಲ್ಲಿ ಕೊರೊನಾ ವೈರಸ್  ಭೀತಿ ಶುರುವಾಗಿದ್ದು, ದೊಡ್ಡಬಳ್ಳಾಪುರ ಕೆಎಸ್ಆರ್​ಟಿಸಿ ಡಿಪೋ ಅಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

coronavirus fears
ದೊಡ್ಡಬಳ್ಳಾಪುರದಲ್ಲಿ ಕೆಎಸ್ಆರ್​​ಟಿಸಿ ಬಸ್​ಗಳ ಸ್ವಚ್ಛತೆ
author img

By

Published : Mar 6, 2020, 10:11 PM IST

ದೊಡ್ಡಬಳ್ಳಾಪುರ : ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ವಿಶ್ವದಾದ್ಯಂತ ಹರಡುತ್ತಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇನ್ನು ರಾಜ್ಯದಲ್ಲೂ ಕೊರೊನಾ ವೈರಸ್ ಭೀತಿ ಶುರುವಾಗಿದ್ದು ಜಿಲ್ಲೆಯ ಕೆಎಸ್ಆರ್​ಟಿಸಿ ಡಿಪೋ ಅಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಕೆಎಸ್ಆರ್​​ಟಿಸಿ ಬಸ್​ಗಳ ಸ್ವಚ್ಛತೆ

ಜಿಲ್ಲೆಯ ಕೆಎಸ್ಆರ್​ಟಿಸಿ ಡಿಪೋದಲ್ಲಿ 150ಕ್ಕೂ ಅಧಿಕ ಬಸ್​ಗಳಿದ್ದು, 100ಕ್ಕೂ ಹೆಚ್ಚು ಬಸ್ ಗಳು ರಾಜಧಾನಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತವೆ. ಜಿಲ್ಲೆಯ ಕೆಎಸ್ಆರ್​ಟಿಸಿ ಡಿಪೋ ಮ್ಯಾನೇಜರ್ ಆನಂದ್ ಎಲ್ಲಾ ಬಸ್​​​ಗಳನ್ನ ಸ್ವಚ್ಛ ಮಾಡುವುದಕ್ಕೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಡೆಟಾಲ್ ಮಿಶ್ರಿತ ನೀರಿನಿಂದ ಬಸ್ಸಿನ ಪ್ರತಿಯೊಂದು ಸೀಟ್​​ಗಳ ಸ್ವಚ್ಛ ಮಾಡಲಾಗುತ್ತಿದ್ದು, ಸಿಂಪರಣೆ ಯಂತ್ರದ ಮೂಲಕ ಡೆಟಲ್ ಮಿಶ್ರಿತ ನೀರನ್ನು ಬಸ್ಸಿನ ಮೇಲ್ಛಾವಣಿಗೂ ಸಿಂಪರಿಸಲಾಗುತ್ತಿದೆ. ಅಧಿಕಾರಿಗಳ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.