ETV Bharat / state

ಮುಂಬೈನಿಂದ ದೊಡ್ಡಬಳ್ಳಾಪುರಕ್ಕೆ ಬರಲು ಯತ್ನಿಸಿದ್ದ 6 ಮಂದಿಯಲ್ಲಿ ಮೂವರಿಗೆ ಕೊರೊನಾ! - Mumbai to doddaballapur

ಮುಂಬೈನಲ್ಲಿ ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ತಾಲೂಕಿನ ಹೊಸಹಳ್ಳಿತಾಂಡದ ಆರು ಮಂದಿ ಮೇ 19ರಂದು ದೊಡ್ಡಬಳ್ಳಾಪುರಕ್ಕೆ ಬರಲು ಯತ್ನಿಸಿದ್ದರು. ಈ ವೇಳೆ ಚೆಕ್ ಪೋಸ್ಟ್​ನಲ್ಲಿ ತಡೆದು ಕ್ವಾರಂಟೈನ್​ಗೆ ಒಳಪಡಿಸಿದಾಗ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕೊರೊನಾ
ಕೊರೊನಾ
author img

By

Published : May 22, 2020, 1:41 PM IST

ದೊಡ್ಡಬಳ್ಳಾಪುರ: ಮುಂಬೈನಿಂದ ದೊಡ್ಡಬಳ್ಳಾಪುರಕ್ಕೆ ಬರಲು ಯತ್ನಿಸಿದ್ದ 6 ಮಂದಿಯಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಮುಂಬೈನಲ್ಲಿ ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ತಾಲೂಕಿನ ಹೊಸಹಳ್ಳಿತಾಂಡದ ಆರು ಮಂದಿ ಮೇ 19ರಂದು ದೊಡ್ಡಬಳ್ಳಾಪುರಕ್ಕೆ ಬರಲು ಯತ್ನಿಸಿದ್ದರು. ಈ ವೇಳೆ ಚೆಕ್ ಪೋಸ್ಟ್​ನಲ್ಲಿ ತಡೆದು ಕ್ವಾರಂಟೈನ್​ಗೆ ಒಳಪಡಿಸಿದಾಗ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಲಾಕ್ ಡೌನ್ ಜಾರಿಯಾದ ಹಿನ್ನೆಲೆ ಮುಂಬೈನಲ್ಲಿಯೇ ಇದ್ದ ಇವರು ಮೇ 19 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಬಂದಿದ್ದರು. ಅಲ್ಲಿಂದ ಗೌರಿಬಿದನೂರು- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಆಟೋದ ಮೂಲಕ ಹೊಸಹಳ್ಳಿ ತಾಂಡಗೆ ಪ್ರಯಾಣ ಬೆಳೆಸಿದ್ದರು. ದೊಡ್ಡಬಳ್ಳಾಪುರ ಗಡಿಯ ಗುಂಜೂರು ಚೆಕ್ ಪೋಸ್ಟ್​ನಲ್ಲಿ ವಿಚಾರಣೆ ನಡೆಸಿದಾಗ ಮುಂಬೈನಿಂದ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.

ಇವರಲ್ಲಿ ಮೂರು ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನುಳಿದ ಮೂವರನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.