ETV Bharat / state

ಸಿಗಂಧೂರು ಚೌಡೇಶ್ವರಿ ಆಯ್ತು ಈಗ ಮಧುರೆ ಶನಿಮಹಾತ್ಮ ದೇವಸ್ಥಾನದ ವಿವಾದ

author img

By

Published : Oct 25, 2020, 11:02 PM IST

ಆಯುಧಪೂಜೆ ದಿನವೇ ಕನಸವಾಡಿ ಶನಿಮಹಾತ್ಮ ದೇವಸ್ಥಾನದಲ್ಲಿ ಗಲಾಟೆ ನಡೆದಿದ್ದು, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷನಿಂದ ಕಡಲೇಪುರಿ ವ್ಯಾಪರಿಯ ಮೇಲೆ ಹಲ್ಲೆ ನಡದಿದೆ ಎನ್ನಲಾಗಿದೆ.

Madurai Shanimahatma Temple
ಮಧುರೆ ಶನಿಮಹಾತ್ಮ ದೇವಸ್ಥಾನದ ವಿವಾದ

ದೊಡ್ಡಬಳ್ಳಾಪುರ: ಇತ್ತೀಚೆಗೆ ದೇವಾಲಯಕ್ಕೂ ವಿವಾದಕ್ಕೂ ಬಿಡಿಸಲಾರದ ನಂಟು, ಮೊನ್ನೆ ಸಿಗಂಧೂರು ಚೌಡೇಶ್ವರಿಯ ವಿವಾದವಾದರೆ, ಇಂದು ಮಧುರೆ ಶನಿಮಹಾತ್ಮ ದೇವಸ್ಥಾನದ ವಿವಾದ ಮುನ್ನೆಲೆಗೆ ಬರುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿರುವುದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ.

ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಅಂಗಡಿಯ ಮುಂದೆ ಮಂಜುಳ ಎಂಬುವವರು ಕಡಲೇಪುರಿ ಅಂಗಡಿ ಇಟ್ಟುಕೊಂಡಿದ್ದರು. ಶನಿಮಹಾತ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಕಾಶ್ ಆಡಳಿತ ಮಂಡಳಿಯಿಂದ ಪ್ರಸಾದ ನಿಲಯದ ಗೇಟ್ ಮುಂಭಾಗದಲ್ಲಿ ಕಡಲೇಪುರಿ ಅಂಗಡಿ ಇಟ್ಟಿದ್ದಾರೆ. ಆಡಳಿತ ಮಂಡಳಿಯ ಸನಿಹದಲ್ಲಿ ಮಂಜುಳರವರ ಕಡಲೇಪುರಿ ಅಂಗಡಿ ಇದ್ದು, ಮಂಜುಳ ಕಡಲೇಪುರಿಯಿಂದ ಆಡಳಿತ ಮಂಡಳಿ ಕಡಲೇಪುರಿ ಅಂಗಡಿಯಲ್ಲಿ ವ್ಯಾಪಾರವಾಗುತ್ತಿಲ್ಲವೆಂದು ಪ್ರಕಾಶ್ ಗೆ ಮಂಜುಳ ಮೇಲೆ ಅಸಮಾಧಾನ ಇತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ದಿನಾಂಕ 24-10-2020ರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರನ್ನ ಬಲವಂತದಿಂದ ಕೈ ಹಿಡಿದು ಕಡಲೇಪುರಿ ಖರೀದಿಸುವಂತೆ ಮಂಜುಳ ಒತ್ತಾಯಿಸುತ್ತಿದ್ದರು. ಇದನ್ನ ಕಂಡ ಪ್ರಕಾಶ್ ಮಂಜುಳ ಅಂಗಡಿಯ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ, ಅವಾಚ್ಯ ಶಬ್ದಗಳಿಂದ ಮಂಜುಳರನ್ನ ನಿಂದಿದ್ದಾರೆ. ಮಂಜುಳರವರ ಪತಿ ಮುನಿಯಪ್ಪ ಮೇಲೆ ಹಲ್ಲೆ ಮಾಡಿದ್ದಾರೆ, ಮುನಿಯಪ್ಪ ತಲೆಗೆ ಗಾಯಾವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದೇವಸ್ಥಾನಕ್ಕೆ ಬರುವ ಭಕ್ತರನ್ನು ನಂಬಿ 50 ಕ್ಕೂ ಹೆಚ್ಚು ಕಡೇಪುರಿ ಮತ್ತು ತೆಂಗಿನಕಾಯಿ ಅಂಗಡಿ ಇಟ್ಟು 50 ವರ್ಷದಿಂದ ಜೀವನ ನಡೆಸುತ್ತಿದ್ದಾರೆ. ನೆಲಮಂಗಲದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ, ಈ ದೇವಸ್ಥಾನದ ಮುಂಭಾಗವೇ ಹಾದು ಹೋಗಲಿದೆ. ರಸ್ತೆ ಅಗಲೀಕರಣದಿಂದ ಕಡಲೇಪುರಿ ಮತ್ತು ತೆಂಗಿನಕಾಯಿ ಕಾಯಿ ಅಂಗಡಿಗಳನ್ನ ಎತ್ತಂಗಡಿಯಾಗಲಿದೆ ಎಂಬ ಭಯ ವ್ಯಾಪಾರಿಗಳನ್ನು ಕಾಡುತ್ತಿದೆ. ಇದೇ ಸಮಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಹ ದೇವಸ್ಥಾನದ ಮುಂಭಾಗದಲ್ಲಿನ ಅಂಗಡಿ ತೆರವುಗೊಳಿಸಲು ಒತ್ತಾಯ ಮಾಡುತ್ತಿದೆ. ಇದರಿಂದ ಸಹಜವಾಗಿಯೇ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ವ್ಯಾಪಾರಿಗಳಿಗೆ ಅಸಮಾಧನವಿದೆ.

ಇದೇ ಸಮಯದಲ್ಲಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಕಡಲೇಪುರಿ ಅಂಗಡಿ ವ್ಯಾಪಾರಿ ಮುನಿಯಪ್ಪ ಮೇಲೆ ಹಲ್ಲೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದರು, ಪ್ರಕಾಶ್ ಬಂಧಿಸಿಲ್ಲವೆಂದು ವ್ಯಾಪಾರಿಗಳ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ದೇವಸ್ಥಾನದ ಅಧ್ಯಕ್ಷ ರ ಬಂಧನವಾಗದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಒತ್ತಡ ಸಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.