ETV Bharat / state

No Road​, No Tax.. ರಸ್ತೆ ಗುಂಡಿಗಳ ವಿರುದ್ಧ ಮಹದೇವಪುರದಲ್ಲಿ ಪ್ರತಿಭಟನೆ - congress and people protest about the dirty road

ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ನ ನಲ್ಲೂರಹಳ್ಳಿಯ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾ ಜಾಥವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ‌ ಸ್ಥಳೀಯ ರೆಸಿಡೆನ್ಸಿ ನಿವಾಸಿಗಳು ಭಾಗವಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

congress-and-people-protest-about-the-dirty-road-in-mahadevapura
ರಸ್ತೆ ಗುಂಡಿಗಳ ವಿರುದ್ದ ಮಹದೇವಪುರ ಕಾಂಗ್ರೆಸ್ ಮತ್ತು ಸ್ಥಳೀಯ ರೆಸಿಡೆನ್ಸಿ ‌ನಿವಾಸಿಗಳಿಂದ ಪ್ರತಿಭಟನೆ
author img

By

Published : Jun 12, 2022, 10:48 PM IST

ಮಹದೇವಪುರ(ಬೆಂಗಳೂರು) : ಈ ಕ್ಷೇತ್ರದ ಹಗದೂರು ವಾರ್ಡ್ ನ ನಲ್ಲೂರಹಳ್ಳಿಯ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾ ಜಾಥವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ‌ ಸ್ಥಳೀಯ ರೆಸಿಡೆನ್ಸಿ ನಿವಾಸಿಗಳು ಭಾಗವಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಲ್ಲೂರಹಳ್ಳಿ ಸರ್ಕಲ್ ನಿಂದ ಸಿದ್ಧಾಪುರ , ಸರ್ಜಾಪುರ ಮುಖ್ಯ ರಸ್ತೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ರೆಸಿಡೆನ್ಸಿ ನಿವಾಸಿಗಳು ನೋ ರೋಡ್, ನೋ ಟ್ಯಾಕ್ಸ್ ಎಂಬ ನಾಮಫಲಕಗಳನ್ನು ಹಿಡಿದು ಪ್ರತಿಭಟನಾ ಜಾಥವನ್ನು ಕೈಗೊಂಡರು. ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ರಸ್ತೆ ಗುಂಡಿಗಳ ವಿರುದ್ದ ಮಹದೇವಪುರ ಕಾಂಗ್ರೆಸ್ ಮತ್ತು ಸ್ಥಳೀಯ ರೆಸಿಡೆನ್ಸಿ ‌ನಿವಾಸಿಗಳಿಂದ ಪ್ರತಿಭಟನೆ

ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಬಂದ ಮೇಲೆ ಜಾತಿ, ಧರ್ಮಗಳ ಹೆಸರಿನಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ. ಅದರ ಹೊರತಾಗಿ ಅಭಿವೃದ್ಧಿ ಕಾರ್ಯಗಳು ಶೂನ್ಯ ಎಂದು ಕೆಪಿಸಿಸಿ ಎಸ್ ಸಿ ಘಟಕದ ಉಪಾಧ್ಯಕ್ಷ ನಲ್ಲೂರಹಳ್ಳಿ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು. ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಪ್ರತಿಭಟನೆ ಕೈಗೊಳ್ಳಲಾಗುತ್ತಿಲ್ಲ. ಪ್ರತಿಭಟನೆಗೆ ಸ್ಥಳೀಯ ರೆಸಿಡೆನ್ಸಿ ನಿವಾಸಿಗಳು ಸಹ ಸಹಕಾರ ನೀಡಿದ್ದಾರೆ. ಸಾರ್ವಜನಿಕರು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಸ್ತೆಗಿಳಿದಿದ್ದಾರೆ. ರಸ್ತೆಗಳು ಹಾಳಾಗಿದ್ದರೂ ಸರಿಪಡಿಸದೇ ಸಾರ್ವಜನಿಕರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಯುಜಿಡಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿತ್ತು. ಬಳಿಕ ರಸ್ತೆಗಳ ದುರಸ್ತಿಗೊಳಿಸುವಲ್ಲಿ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಹಾಗೂ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಹಗದೂರು ವಾರ್ಡ್ ನಲ್ಲೂರಹಳ್ಳಿ , ಸಿದ್ದಾಪುರ ವೈಟ್ ಫೀಲ್ಡ್ ಬೇರೆ ಬೇರೆ ಗ್ರಾಮಗಳಿ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳೆಲ್ಲವೂ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ಜೀವಭಯ ತಂದೊಡ್ಡಿದೆ ಎಂದು ಹೇಳಿದ್ದಾರೆ. ಈ ಸಂದರ್ಭಗಳಲ್ಲಿ ನಲ್ಲೂರಹಳ್ಳಿ ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಬು ಗೌಡ, ಕಾಂಗ್ರೆಸ್ ಮುಖಂಡ ಗೊವಿಂದ, ಜೈರಾಮ್ ರೆಡ್ಡಿ, ವನಜ ರೆಡ್ಡಿ, ನಾಗರಾಜ್, ಸಂದೀಪ್, ಲಾವಣ್ಯ, ರಾಜಾ ಹುಲಿ ಮತ್ತಿತರರು ಉಪಸ್ಥಿತರಿದ್ದರು.

ಓದಿ : ಕಾಂಗ್ರೆಸ್ ಅಭ್ಯರ್ಥಿ ಹುಕ್ಕೇರಿ ವಿರುದ್ಧ ಹಣ ಹಂಚಿಕೆ ಆರೋಪ: ಕ್ರಮಕ್ಕೆ ಬಿಜೆಪಿ ಅಭ್ಯರ್ಥಿ ಆಗ್ರಹ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.