ETV Bharat / state

ಕೆಐಎಎಲ್​ನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

author img

By

Published : May 19, 2021, 4:29 PM IST

ಅಗತ್ಯ ಸೇವೆ ನೀಡುತ್ತಿರುವ ಗ್ರೀನ್ ಕೋ ಸಂಸ್ಥೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಕೃತಜ್ಞತೆ ಅರ್ಪಿಸುವುದಾಗಿ ಸಿಎಂ ಬಿಎಸ್​ವೈ ತಿಳಿಸಿದರು.

cm-yediyurappa-inaugurates-covid-care-center-at-kial
ಕೆಐಎಎಲ್​ನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಸಿ ಎಂ ಯಡಿಯೂರಪ್ಪ

ದೇವನಹಳ್ಳಿ: ಗ್ರೀನ್-ಕೋ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿನ ಉಪಯೋಗಕ್ಕಾಗಿ 200 ಲಾರ್ಜ್ ಮೆಡಿಕಲ್ ಗ್ರೇಡ್ 10 ಎಲ್‍ಪಿಎಂ ಆಕ್ಸಿಜನ್ ಕಾನ್ಸಾಂಟ್ರೇಟರ್​​ ಸ್ವೀಕರಿಸಲಾಗಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ 150 ಹಾಸಿಗೆಗಳ ಸೌಲಭ್ಯವುಳ್ಳ ಕೋವಿಡ್ ಕೇರ್ ಸೆಂಟರ್​ ಉದ್ಘಾಟಿಸಿ ಮಾತನಾಡಿದ ಅವರು, ಫೇರ್‌ಫ್ಯಾಕ್ಸ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕ್ವೆಸ್ ಆನ್ಸಿಯಾಲಿ ಟಿ ಕೆಂಪೆಗ್ವಿಟಾ, ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಫೌಂಡೇಶನ್ (ಕೆಐಎಎಫ್) ಸಹಭಾಗಿತ್ವದಲ್ಲಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ನಿಂದ ಹಾಗೂ ಸಮೂಹದ ಹೂಡಿಕೆದಾರ ಕಂಪನಿಗಳ ವತಿಯಿಂದ 150 ಹಾಸಿಗೆಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್​​ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಾಗಿದ್ದು ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಗ್ರೀನ್-ಕೋ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿನ ಉಪಯೋಗಕ್ಕಾಗಿ 200 ಲಾರ್ಜ್ ಮೆಡಿಕಲ್ ಗ್ರೇಡ್ 10 ಎಲ್‍ಪಿಎಂ ಆಕ್ಸಿಜನ್ ಕಾನ್ಸಾಂಟ್ರೇಟರ್​​​ ಸ್ವೀಕರಿಸಲಾಗಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ನೂರಾರು ಜನರ ಪ್ರಾಣ ಉಳಿಸಲು ನೆರವಾಗಲಿದೆ. ಅಗತ್ಯ ಸೇವೆ ನೀಡುತ್ತಿರುವ ಗ್ರೀನ್ ಕೋ ಸಂಸ್ಥೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.

ಓದಿ: ₹1,250 ಕೋಟಿ ವೆಚ್ಚದ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಬಿಎಸ್‌ವೈ.. ಅಸಂಘಟಿತ ಕಾರ್ಮಿಕರು, ರೈತರಿಗೆ ಸಿಕ್ಕಿದ್ದು,ದಕ್ಕಿದ್ದೆಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.