ದೊಡ್ಡಬಳ್ಳಾಪುರ: ನಗರದ ಟಿಎಪಿಎಂಸಿ ಆವರಣದಲ್ಲಿರುವ ಪಡಿತರ ವಿತರಣಾ ಕೇಂದ್ರ ನಂ.75 ರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಸೇಲ್ಸ್ಮ್ಯಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪ್ರತಿ ತಿಂಗಳು ಅಕ್ಕಿ, ರಾಗಿ ಮತ್ತು ಗೋಧಿ ವಿತರಣೆ ಮಾಡುವಾಗ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಇಲಾಖೆಗೆ ಆನ್ ಲೈನ್ ಮೂಲಕ, ಕಳೆದ ತಿಂಗಳ 23 ರಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಹಾರ ಇಲಾಖೆಯ ಲೀಗಲ್ ಫುಡ್ ಇನ್ಸ್ಪೆಕ್ಟರ್ ಎಸ್. ಟಿ ವೆಂಕಟೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಪಡಿತರ ವಿತರಣಾ ಕೇಂದ್ರದ ಆವರಣದಲ್ಲಿ ಸಾರ್ವಜನಿಕರಿಗೆ ವಿತರಿಸಿದ ಅಕ್ಕಿ ಮತ್ತು ರಾಗಿ ಮರು ತೂಕ ಮಾಡಿದಾಗ 1 ರಿಂದ 1.5 ಕೆ.ಜಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಸೇಲ್ಸ್ಮ್ಯಾನ್ ವಿರುದ್ಧ ಕಾನೂನು ಕ್ರಮಕ್ಕೆ ಲೀಗಲ್ ಫುಡ್ ಇನ್ಸ್ಪೆಕ್ಟರ್ ಎಸ್ ಟಿ ವೆಂಕಟೇಶ್ ಸೂಚಿಸಿದ್ದಾರೆ.
ಇದನ್ನೂ ಓದಿ: ಪಡಿತರ ಚೀಟಿಯಲ್ಲಿ ಏಸುವಿನ ಫೋಟೋ: ರಾಮನಗರದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ
ಕಳೆದ ಬಾರಿ ಪಡಿತರ ಕೇಂದ್ರದ ವಿರುದ್ಧ ದೂರು ಬಂದಾಗಲೂ ದಾಳಿ ನಡೆಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಆಹಾರ ಇಲಾಖೆಗೆ ಮತ್ತೆ ದೂರು ಬಂದಿತ್ತು.