ETV Bharat / state

ಬೆಂಗಳೂರಿನ ಜತೆ ಹೈದರಾಬಾದ್​ ಕೂಡ ಐಟಿ ಹಬ್​: ಚಂದ್ರಬಾಬು ನಾಯ್ಡು - TDP forum

ಬೆಂಗಳೂರಿನಲ್ಲಿ ಆಯೋಜಿಸಿದ್ದ ಟಿಡಿಪಿ ಸಮಾವೇಶದಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಭಾಗಿಯಾಗಿದ್ದರು.

ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
author img

By ETV Bharat Karnataka Team

Published : Dec 28, 2023, 2:29 PM IST

ಬೆಂಗಳೂರು: ನಾನು ಮುಖ್ಯಮಂತ್ರಿಯಾದಾಗ ತೆಲುಗಿನ ಜನರು ಕೇವಲ ಕೃಷಿಕರಾಗಿದ್ದರು. ರೈತನ ಮಗ ಇಂದು ಐಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಐಟಿ ಅಂದರೆ ಬೆಂಗಳೂರು ಆಗಿತ್ತು.‌ ಇದೀಗ ಸಿಲಿಕಾನ್​ ಸಿಟಿ ಜೊತೆಗೆ ಹೈದರಾಬಾದ್ ಸಹ ಹಬ್​ ಆಗಿ ಗುರುತಿಸಿಕೊಳ್ಳುತ್ತಿದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.

ಬೆಂಗಳೂರು ಟಿಡಿಪಿ ಫೋರಂ ಇಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನನಗೆ ಕಷ್ಟಬಂದಾಗ ಎಲ್ಲರೂ ಬೆಂಬಲ ನೀಡಿದ್ದೀರಿ. ದೇಶ-ವಿದೇಶಗಳಿಂದ ನನಗೆ ಬೆಂಬಲ ಬಂದಿದೆ. ಬೆಂಗಳೂರು ಸೇರಿದಂತೆ ವಿಶ್ವದ ಎಲ್ಲ ಕಡೆಯೂ ತೆಲುಗಿನವರು ಇದ್ದಾರೆ. ಇದು ತುಂಬ ಗರ್ವಪಡಬೇಕಾದ ಸಂಗತಿ ಎಂದರು.

ಹೈದರಾಬಾದ್​ ಇಂದು ಐಟಿ ಹಬ್​ ಆಗಿ ಬೆಳೆಯುತ್ತಿದೆ. ಈ ಹಿಂದೆ ಬೆಂಗಳೂರು ಮಾತ್ರ ತಂತ್ರಜ್ಞಾನದ ಪ್ರಮುಖ ನಗರವಾಗಿತ್ತು. ಈಗ ಎಲ್ಲೆಡೆಯಿಂದ ಜನರು ಹೈದರಾಬಾದ್​ಗೆ ಬರುತ್ತಿದ್ದಾರೆ. ತೆಲುಗಿನ ಯುವಕರು ಕೂಡ ಐಟಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ. ನಾಲ್ಜೆಡ್ ಎಕಾನಮಿಯಲ್ಲಿ ನಾವು ಮುಂದಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

  • " class="align-text-top noRightClick twitterSection" data="">

ತೆಲುಗು ರಾಷ್ಟ್ರಗಳಿಗೆ ಐಟಿ ಕಂಪನಿಗಳು ಬರುವಂತೆ ನಾನು ಸಿಎಂ ಆಗಿದ್ದಾಗ ಮಾಡಿದ್ದೆ. ಉದ್ಯೋಗ ನೀಡುವುದರ ಜೊತೆಗೆ ಉದ್ಯಮಿಗಳನ್ನ ಗುರುತಿಸುವ ಕೆಲಸ ಮಾಡಿದ್ದೆ. ಥಿಂಕ್ ಗ್ಲೋಬಲ್​ ಆ್ಯಕ್ಟ್ ಗ್ಲೋಬಲ್​ ಎಂಬ ಚಿಂತನೆಯಡಿ ನೆಟ್​ವರ್ಕ್ ಸೃಷಿಸುವ ಸಾರ್ಮರ್ಥ್ಯ ತೆಲುಗಿನವರಿಗಿದೆ ಎಂದರು.

ಜಾಗತೀಕರಣ ಬಳಿಕ ಎಲ್ಲಾ ರಂಗಗಳಲ್ಲಿ ದೇಶ ಆಭಿವೃದ್ಧಿಯಾಗುತ್ತಿದೆ. ನವಭಾರತ ಉದಯವಾಗುತ್ತಿದೆ. ಇದರಲ್ಲಿ ತೆಲುಗಿನವರ ಪಾತ್ರ ದೊಡ್ಡದಿರಲಿದೆ. 2047 ರ ವೇಳೆಗೆ ವಿಶ್ವದ ಮತ್ತು ದೇಶದ ಕಮ್ಯೂನಿಟಿ ತೆಲುಗು ಜನಾಂಗದವರೇ ಆಗಲಿದೆದ್ದಾರೆ. ಇದೇ ನನ್ನ ಆಲೋಚನೆ, ದೂರದೃಷ್ಟಿಯಾಗಿದೆ ಎಂದು ಚಂದ್ರಬಾಬು ನಾಯ್ಡು ಅವರು ಹೇಳಿದರು.

ಕೌಶಲ್ಯಾಭಿವೃದ್ಧಿ ಕೇಸ್​: ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9ರಂದು ಅಲ್ಲಿನ ಸಿಐಡಿ ಪೊಲೀಸರು ಬಂಧಿಸಿದ್ದರು. ನಾಯ್ಡು ಅಕ್ಟೋಬರ್ 31ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದರು. ವೈದ್ಯಕೀಯ ಚಿಕಿತ್ಸೆ ಪಡೆಯಲು ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ನವೆಂಬರ್ 20ರಂದು ನಾಯ್ಡು ಅವರಿಗೆ ನಿಯಮಿತ ಜಾಮೀನು ನೀಡಲಾಗಿತ್ತು.

ನವೆಂಬರ್ 30ರಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯಕ್ಕೆ ಅವರು ಹಾಜರಾಗಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಮತ್ತೊಂದೆಡೆ, ಸಿಐಡಿ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ನಾಯ್ಡು ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪು ಕಾಯ್ದಿರಿಸಿದೆ.

ಇದನ್ನೂ ಓದಿ: ಫೈಬರ್ ನೆಟ್ ಪ್ರಕರಣ: ಬಹಿರಂಗ ಹೇಳಿಕೆ ನೀಡದಂತೆ ಚಂದ್ರಬಾಬು ನಾಯ್ಡು, ಎಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.