ETV Bharat / state

ನೆಲಮಂಗಲ: ಸರಗಳ್ಳತನ ಪ್ರಕರಣದಡಿ ನಾಲ್ವರ ಬಂಧನ - Nelamangala Bangalore latest news

ಬಂಧಿತರು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ, ಲಕ್ಷ್ಮಿಪುರ, ಆಲೂರು ಹಾಗೂ ದೊಂಬರಹಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು.

Chain snatching
Chain snatching
author img

By

Published : Jul 18, 2020, 10:39 PM IST

ನೆಲಮಂಗಲ: ಬ್ಲಾಕ್‌ ಪಲ್ಸರ್ ಹಾಗೂ ಡಿಯೋ ಬೈಕ್ ಬಳಸಿ ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಮೂಲದ ರಂಗರಾಜು ಸಿ.ಪಿ ಅಲಿಯಾಸ್ ರಾಜು (32), ತಮಿಳುನಾಡು ರಾಜ್ಯ ಕೃಷ್ಣಗಿರಿ ಮೂಲದ ಶಶಿಕುಮಾರ್ (26) ಅಲಿಯಾಸ್ ಶಶಿ, ಹಾಸನ ಮೂಲದ ಸಂದೀಪ್ ಟಿ.ಎನ್ (25) ಅಲಿಯಾಸ್ ಕಿಟ್ಟಿ ಹಾಗೂ ಹಾಸನ ಮೂಲದ ಗೋಪಾಲ್ ಎ.ಬಿ(20) ಬಂಧಿತರು. ಈ ಮೂರು ಜನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತೊಬ್ಬ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಬಂಧಿತರು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ, ಲಕ್ಷ್ಮಿಪುರ, ಆಲೂರು ಹಾಗೂ ದೊಂಬರಹಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಕೃತ್ಯಕ್ಕೆ ಬಳಸಿದ್ದ ಬ್ಲಾಕ್ ಪಲ್ಸರ್, ಕಳ್ಳತನ ಮಾಡಿದ್ದ ಡಿಯೋ ಬೈಕ್ ಹಾಗೂ 140 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನೂ ಬಂಧಿತ ಆರೋಪಿಗಳು ಲಾಕ್‌ಡೌನ್‌ನಲ್ಲಿನ ಆರ್ಥಿಕ ಹೊಡೆತವನ್ನು ಸರಿದೂಗಿಸಿಕೊಳ್ಳಲು ಕಳ್ಳತನ ಮಾಡಿದ್ದರು ಎನ್ನುವ ಅನುಮಾನ ವ್ಯಕ್ತವಾಗಿದ್ದು, ಸದ್ಯ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದೆವು ಎಂದು ತನಿಖೆ ವೇಳೆ ತಿಳಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.