ದೊಡ್ಡಬಳ್ಳಾಪುರ: ಕಾನೂನು ಎನ್ನುವುದು ಎಲ್ಲರಿಗೂ ಒಂದೇ. ಸಾಮಾನ್ಯ , ಶ್ರೀಮಂತ ಎಲ್ಲರೂ ಕಾನೂನಿನ ಅಡಿಯಲ್ಲಿ ಸಮಾನರು. ಚಲನಚಿತ್ರ ನಟರು ಕೂಡಾ ಇದಕ್ಕೆ ಹೊರತಲ್ಲ.
ಚೆಕ್ಪೋಸ್ಟ್ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಕಾರು ತಪಾಸಣೆಗೆ ಒಳಗಾದಾಗ ಅಧಿಕಾರಿಗಳಿಗೆ ಶಿವಣ್ಣ ತಾಳ್ಮೆಯಿಂದಲೇ ಸಹಕರಿಸಿದ್ದಾರೆ. ಲೋಕಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ತಾಲೂಕಿನ ಗಡಿ ಭಾಗದಲ್ಲಿ ಸಂಚರಿಸುವ ಎಲ್ಲಾ ಖಾಸಗಿ ವಾಹನಗಳನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಬೆಂಗಳೂರು - ಗೌರಿಬಿದನೂರು ರಾಜ್ಯ ಹೆದ್ದಾರಿ 9 ಮಾರ್ಗವಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಿನಿಮಾ ಶೂಟಿಂಗ್ ಸಲುವಾಗಿ ಗೌರಿಬಿದನೂರಿನತ್ತ ಹೋಗುವಾಗ ತಿಪ್ಪಗಾನಹಳ್ಳಿ ಚೆಕ್ ಪೋಸ್ಟ್ ಬಳಿ ಅವರ ಕಾರನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಶಿವಣ್ಣ ಕೂಡಾ ತಾಳ್ಮೆಯಿಂದಲೇ ಜನಸಾಮಾನ್ಯರಂತೆ ತಪಾಸಣೆಗೆ ಸಹಕರಿಸಿದ್ದಾರೆ. ಅಧಿಕಾರಿಗಳು ತಪಾಸಣೆ ನಡೆಸಿ ಕಾರ್ ನಂಬರ್ ಹಾಗೂ ಮೊಬೈಲ್ ನಂಬರನ್ನು ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳ ಕೆಲಸಕ್ಕೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಅಧಿಕಾರಿಗಳು ಶಿವರಾಜ್ ಕುಮಾರ್ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ.