ಆನೇಕಲ್ (ಬೆಂಗಳೂರು): ಕೊರೊನಾ ನಿಯಂತ್ರಿಸುವ ಸಲುವಾಗಿ ಮುಂಬರುವ ಎಲ್ಲ ಧರ್ಮದ ಹಬ್ಬಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಗಳಲ್ಲಿಯೇ ಆಚರಿಸಬೇಕು ಎಂದು ಪೊಲೀಸರು ಪಥ ಸಂಚಲನದ ಜನರಿಗೆ ತಿಳಿಸಿದರು.
ಜನರ ಸುರಕ್ಷತೆಗಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಆದರೆ ಕೆಲವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಎಲ್ಲೆಂದರಲ್ಲಿ ತಿರುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಪಥಸಂಚಲನದ ಮೂಲಕ ಜಾಗೃತಿ ಕಾರ್ಯದಲ್ಲಿ ತೊಡಗಿದೆ.
ಆನೇಕಲ್ ಪಟ್ಟಣದಲ್ಲಿ ಸಂಜೆ ಪೊಲೀಸ್ ಠಾಣಾ ವೃತ್ತದಿಂದ ಆರಂಭವಾದ ಸಂಚಲನ ಥಳಿ ವೃತ್ತ, ಮಸೀದಿ, ಚರ್ಚ್ ರೋಡ್, ಮಟನ್ ಮಾರ್ಕೆಟ್, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದಿಂದ ಬಸ್ ನಿಲ್ದಾಣದ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿತು.
ಮೀಸಲು ಪಡೆ ಆನೇಕಲ್ ಪೊಲೀಸರು, ಅಡಿಷನಲ್ ಎಸ್ಪಿ, ಡಿವೈಎಸ್ಪಿ, ಸಿಐ, ಎಸ್ಐ ಮತ್ತಿತರರ ಸಿಬ್ಬಂದಿ ಪಥಸಂಚಲನ ಮುನ್ನೆಡೆಸಿದರು.