ದೇವನಹಳ್ಳಿ: ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ತೆರಿಗೆಯಾಗಿ ಪಡೆದ ಹಣವನ್ನ ಪಂಚಾಯಿತಿ ಅಕೌಂಟ್ಗೆ ಜಮೆ ಮಾಡದೇ 5 ಕೋಟಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಕರ ವಸೂಲಿಗಾರನ ಮೇಲೆ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಕರ ವಸೂಲಿಗಾರರಾದ ಬಿ.ಪಿ.ಮಂಜುನಾಥ 2020-21 ನೇ ಸಾಲಿನ ಒಟ್ಟು 7 ರಸೀದಿ ಪುಸ್ತಕಗಳಲ್ಲಿ ಸಾರ್ವಜನಿಕರಿಂದ ವಸೂಲಾದ ತೆರಿಗೆ ಹಣ ಪಂಚಾಯಿತಿ ಅಕೌಂಟ್ಗೆ ಜಮೆ ಮಾಡದೇ ಮತ್ತು ರಿಜಿಸ್ಟರ್ನಲ್ಲೂ ನಮೂದಿಸಿಸದೇ ಒಟ್ಟು 5 ಕೋಟಿ 75 ಲಕ್ಷ ಹಣ ವಂಚನೆ ಮಾಡಿರುವುದಾಗಿ ಪಿಡಿಒ ಆದರ್ಶ ಕುಮಾರ್ ಆರೋಪಿಸಿ ಹಣ ಗೋಲ್ ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ವಿರುದ್ದ ಆದರ್ಶ ಕುಮಾರ್ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಲಕ್ಷಗಟ್ಟಲೇ ಹಣ ಗಳಿಸುವ ಆಮಿಷ: 15 ಸಾವಿರ ಜನರಿಗೆ ಮಕ್ಮಲ್ ಟೋಪಿ: ಇಬ್ಬರು ಆರೋಪಿಗಳು ಅರೆಸ್ಟ್