ETV Bharat / state

ಬ್ರಾಂಡ್ ಬೆಂಗಳೂರು ಪೋರ್ಟಲ್‌ ಬಿಡುಗಡೆ ಮಾಡಿದ ಡಿಕೆಶಿ; ಸಾರ್ವಜನಿಕರ ಸಲಹೆ, ಸೂಚನೆಗೆ ಆಹ್ವಾನ - ಸಾರ್ವಜನಿಕರು ಅಗತ್ಯ ಸಲಹೆ

ಬಜೆಟ್​ನಲ್ಲಿ ಬೆಂಗಳೂರಿಗೆ ಏನು ಕೊಡಬೇಕು ಅಂತ ಸಿಎಂ ಅಧ್ಯಯನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಬ್ರಾಂಡ್ ಬೆಂಗಳೂರು ಪೋರ್ಟಲ್‌ ಬಿಡುಗಡೆ ಮಾಡಿದ ಡಿಸಿಎಂ  ಡಿ ಕೆ ಶಿವಕುಮಾರ್

author img

By

Published : Jun 21, 2023, 3:11 PM IST

ಬೆಂಗಳೂರು : ಬ್ರಾಂಡ್ ಬೆಂಗಳೂರು ಕಟ್ಟಲು ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕೋರಿದ್ದಾರೆ. ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಬೆಂಗಳೂರು ಅಭಿವೃದ್ಧಿ ಸಂಬಂಧ ಜನರು ತಮ್ಮ ಸಲಹೆಗಳನ್ನ ಹೇಗೆ ನೀಡೋದು ಅನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಭಾಗಿಯಾಗಿದ್ದರು.

ಇದೇ ಸಂದರ್ಭ ಮಾತನಾಡಿದ ಡಿಕೆಶಿ, ನನಗೆ ಬೆಂಗಳೂರು ಅಭಿವೃದ್ಧಿ ಹಾಗೂ ನೀರಾವರಿ ಖಾತೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 1 ಕೋಟಿ 60 ಲಕ್ಷ ಜನಸಂಖ್ಯೆ ಇದೆ. 50 ಲಕ್ಷದಷ್ಟು ಜನ ದಿನ ಬಂದು ಹೋಗ್ತಾರೆ. ಬೆಂಗಳೂರಿನಿಂದಲೇ ರಾಜ್ಯದ ಬೊಕ್ಕಸಕ್ಕೆ ಹಣ ಬರ್ತಾ ಇದೆ. ಇಲ್ಲಿನ ವಾತಾವರಣ ನೋಡಿ ಜನ ಹೆಚ್ಚು ಇಲ್ಲಿ ವಾಸ ಮಾಡಲು ಇಷ್ಟಾ ಪಡ್ತಾ ಇದ್ದಾರೆ ಎಂದರು.

ಬ್ರಾಂಡ್ ಬೆಂಗಳೂರು ಪೋರ್ಟಲ್‌ ಬಿಡುಗಡೆ ಮಾಡಿದ ಡಿಸಿಎಂ  ಡಿ ಕೆ ಶಿವಕುಮಾರ್
ಬ್ರಾಂಡ್ ಬೆಂಗಳೂರು ಪೋರ್ಟಲ್‌ ಬಿಡುಗಡೆ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್

ಸಿಎಂ ಅಧ್ಯಯನ ಮಾಡ್ತಾ ಇದ್ದಾರೆ: ಬಜೆಟ್​ನಲ್ಲಿ ಬೆಂಗಳೂರಿಗೆ ಏನು ಕೊಡಬೇಕು ಅಂತ ಸಿಎಂ ಅಧ್ಯಯನ ಮಾಡ್ತಾ ಇದ್ದಾರೆ. ಅದನ್ನ ಅವರೇ ಘೋಷಣೆ ಮಾಡ್ತಾರೆ. ಕಳೆದ ಸಭೆಯಲ್ಲಿ ಬೆಂಗಳೂರಿನ ಸಾಕಷ್ಟು ಪ್ರಮುಖರು ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅವರೆಲ್ಲಾ ಬ್ಯುಸಿನೆಸ್ ಮೆನ್​, ದೊಡ್ಡ ದೊಡ್ಡ ವ್ಯಕ್ತಿಗಳು. ಅವರ ಸಲಹೆಗಳ ಜೊತೆಗೆ ಸಾಮಾನ್ಯ ಜನರ ಸಲಹೆಗಳನ್ನು ನಾವು ಕೇಳುತ್ತೇವೆ. ನಾನು ಮಾಜಿ ಸಿಎಂ ಬೊಮ್ಮಾಯಿ ಅವರ ಸಲಹೆಯನ್ನು ಕೇಳುತ್ತೇವೆ. ಅವರ ಭೇಟಿಗೆ ಸಮಯ ಕೇಳಿದ್ದೆ. ಅವರು ಸದ್ಯ ಬ್ಯುಸಿ ಇದ್ದಾರೆ. ಸದ್ಯದಲ್ಲೇ ಅವರು ಸೇರಿದಂತೆ ಇನ್ನೂ ಹಲವು ಪ್ರಮುಖರನ್ನೂ ಭೇಟಿ ಮಾಡುತ್ತೇನೆ. ಸಲಹೆ ಪಡೆಯುತ್ತೇನೆ ಎಂದು ವಿವರಿಸಿದರು.

ನಾನು ಖುದ್ದು ನೋಡಿದ್ದೇನೆ. ನಗರದಲ್ಲಿ ಫುಟ್ಪಾತ್ ಒತ್ತುವರಿಯಾಗಿದೆ. ಫುಟ್ಪಾತ್ ನಲ್ಲೇ ಸಾಕಷ್ಟು ಅಂಗಡಿಗಳನ್ನ ಇಟ್ಟುಕೊಂಡಿದ್ದಾರೆ. ಇದರಿಂದ ಜನರು ರಸ್ತೆಗಳಲ್ಲಿ ಓಡಾಟ ಮಾಡುತ್ತಾರೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಟ್ರಾಫಿಕ್ ಬಗ್ಗೆ ಕೆಲಸ ಮಾಡಿರುವ ಅಧಿಕಾರಿಗಳು, ತಜ್ಞರ ಸಲಹೆ ಕೂಡ ಪಡೆಯುತ್ತೇವೆ. ನಾನಾ ವಿಧದ ಟನಲ್ ಮಾಡಲು ಸಾಕಷ್ಟು ಸಲಹೆಗಳು ಬಂದಿವೆ. ನನಗೆ ಸಾರ್ವಜನಿಕರ ಸಲಹೆಗಳು ಬೇಕು. ಅದಕ್ಕಾಗಿಯೇ www.brandbengaluru.karnataka.gov.in ವೆಬ್ ಸೈಟ್ ಆರಂಭಿಸಿದ್ದೇವೆ. ಇದರಲ್ಲಿ ಜನರು ಸಲಹೆ ನೀಡಬಹುದು. ನಾನು ಎಲ್ಲರನ್ನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಎಲ್ಲರೂ ಸಲಹೆ ಹಾಗೂ ಅಭಿಪ್ರಾಯ ನೀಡಿ ಎಂದು ಮನವಿ ಮಾಡಿದರು.

ಬೆಂಗಳೂರು ಅಭಿವೃದ್ಧಿಗೆ ಸಲಹೆ ನೀಡಿ: ನಗರದ ರಸ್ತೆಗಳು 100 ಅಡಿಯ ರಸ್ತೆಗಳಲ್ಲ. ಚಿಕ್ಕ ರಸ್ತೆಗಳೇ ನಗರದಲ್ಲಿ ಹೆಚ್ಚಾಗಿ ಇವೆ. ಹಾಗಂತ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಈ ತಿಂಗಳ ಕೊನೆವರೆಗೆ ಅವಕಾಶ ಇದೆ, ಸಲಹೆ ಕೊಡಿ. ಕೆಲವು ಟ್ಯಾಕ್ಸ್ ಜಾಸ್ತಿ ಮಾಡಲು ಸಲಹೆ ನೀಡಿದ್ದಾರೆ. ಮಾಜಿ ಮೇಯರ್, ಕಾರ್ಪೋರೇಟರ್​ಗಳು ಲಿಖಿತ ರೂಪದಲ್ಲಿ ಸಲಹೆ ನೀಡಬಹುದು. ಯಾವುದೇ ದೇಶದಲ್ಲಿ ಇದ್ರೂ ಪರವಾಗಿಲ್ಲ. ಬೆಂಗಳೂರು ಅಭಿವೃದ್ಧಿಗೆ ಸಲಹೆ ನೀಡಿ ಎಂದು ಕೋರಿದರು.

ಬೆಂಗಳೂರಿನಲ್ಲಿ ಚಿಕ್ಕ ಸಮಸ್ಯೆ ಕಂಡುಬಂದ್ರು ಹೊರಗೆ ದೊಡ್ಡದಾಗಿ ಬಿಂಬಿತವಾಗುತ್ತೆ. ಕಾರಣ ಬೆಂಗಳೂರು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಟ್ಯಾನಲ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಟ್ರೈನ್ ಮತ್ತು ಬಸ್​ ಹೋಗುವ ರೀತಿ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಆಸ್ಪತ್ರೆ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ. ಬೆಂಗಳೂರು ಪ್ಲಾನ್ ಸಿಟಿ ಅಲ್ಲ. ಮುಂಬೈ, ದೆಹಲಿ ರೀತಿಯಲ್ಲಿ ಪ್ಲಾನ್ ಸಿಟಿ ಅಲ್ಲ. ಆದ್ರೆ ಮುಂಬೈ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಜಾಸ್ತಿ ಇದೆ. ನಮಗಿಂತಲೂ ದುಬಾರಿ ಟ್ರಾಫಿಕ್ ಇದೆ. ಇಲ್ಲಿ ನೀರು ನುಗ್ಗಿದ್ರು ಸಮಸ್ಯೆ ಆಗುತ್ತೆ. ಅದನ್ನೇ ದೊಡ್ಡದಾಗಿ ಬರೆಯುತ್ತೀರಿ ಎಂದು ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ: ಜುಲೈ 15 ರ ಒಳಗೆ ಸಾರ್ವಜನಿಕರು ಸಲಹೆ ಕೊಡಬಹುದು. ಕಸಕ್ಕೆ ಕೆಲ ನಗರಗಳಲ್ಲಿ ತೆರಿಗೆ ಹಾಕುತ್ತಿದ್ದಾರೆ. ಇಲ್ಲೂ ಹಾಕಿ ಅಂತ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಜತೆಗೆ ಇದನ್ನ ಹಾಕಲು ಸಲಹೆ ಬಂದಿದೆ. ಆದ್ರೆ ಈಗ ವಿದ್ಯುತ್ ಬಿಲ್ ಜತೆ ಹಾಕಲು ಸಾಧ್ಯವಿಲ್ಲ. ಇಂತಹದೊಂದು ಸಲಹೆ ಬಂದಿದೆ. ಇದನ್ನು ಪರಿಶೀಲಿಸುತ್ತೇವೆ. ನಗರದ 20 ವರ್ಷದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕಿದೆ. ನಗರದಲ್ಲಿ ಕೇಬಲ್ ಸಮಸ್ಯೆ ಆಗ್ತಿದೆ. ಅವರನ್ನ ಯಾರು ಸಹ ಕಂಟ್ರೋಲ್ ಮಾಡ್ತಿಲ್ಲ. ಅದಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಬ್ರಾಂಡ್ ಬೆಂಗಳೂರಿಗೆ ಸಾರ್ವಜನಿಕರು ಅಗತ್ಯ ಸಲಹೆ ಸೂಚನೆ ನೀಡಲು ಪೋರ್ಟಲ್ ಲಾಂಚ್ ಮಾಡಲಾಯಿತು.

ಇದನ್ನೂ ಓದಿ: Guarantee scheme: ಗ್ಯಾರಂಟಿ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ ಜನರಿಗೆ ಮೋಸ: ಕಾಂಗ್ರೆಸ್ ವಿರುದ್ಧ ಜೋಶಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.