ETV Bharat / state

ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ಕುರಿತು ಬಿಜೆಪಿ ನಾಯಕರು ಹೇಳಿದ್ದೇನು? - ಶೋಭಾ ಕರಂದ್ಲಾಜೆ

ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಅನರ್ಹತೆಯ ತೀರ್ಪಿನ ಕುರಿತು ಬಿಜೆಪಿಯ ಕೆಲವು ರಾಜಕೀಯ ಗಣ್ಯರು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಸಂವಿಧಾನದ ತತ್ವಕ್ಕೆ ಅಗೌರವ ಸೂಚಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ಅಭಿಪ್ರಾಯ
author img

By

Published : Jul 28, 2019, 4:01 PM IST

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿರುವ ಅನರ್ಹತೆಯ ತೀರ್ಪಿನ ಕುರಿತು ಬಿಜೆಪಿಯ ಕೆಲವು ರಾಜಕೀಯ ಗಣ್ಯರು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಹಾಗೂ ಸಂವಿಧಾನದ ತತ್ವಕ್ಕೆ ಅಗೌರವ ಸೂಚಿಸಿದ್ದಾರೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ನಾಯಕರ ಅಭಿಪ್ರಾಯ

ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

ಕರ್ನಾಟಕ ರಾಜ್ಯದಲ್ಲಿನ ಪ್ರಜಾತಂತ್ರ ವ್ಯವಸ್ಥೆ ಮತ್ತು ಸಂವಿಧಾನದ ಕಗ್ಗೊಲೆ ಆಗಿದೆ. ಸ್ಪೀಕರ್ ಬುದ್ಧಿವಂತರು ಹಾಗೂ ಅನುಭವಿಗಳೆಂದು ನಮ್ಮೆಲ್ಲರಿಗೂ ಗೌರವ ಇತ್ತು. ಆದರೆ ಇವತ್ತು ವಿಧಾನಸಭೆಯ ಗೌರವ ಮಣ್ಣುಪಾಲು ಮಾಡಿದ್ದಾರೆ. ಸ್ಪೀಕರ್ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದರು. ಅಲ್ಲದೇ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಶಾಸಕರು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರ ರಾಜೀನಾಮೆಯ ಕುರಿತು ಕ್ರಮಬದ್ಧವಾಗಿ ರಾಜೀನಾಮೆ ನೀಡಿದರೆ ಅದರ ಅಂಗೀಕಾರ ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದ್ರು, ಆದರೀಗ ಯಾರ ಒತ್ತಡದಿಂದ, ಯಾರ ಆದೇಶದಿಂದ ಅನರ್ಹ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಶಾಸಕ ಶ್ರೀರಾಮಲು ಅಸಮಾಧಾನ

ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕೈಚೀಲವಾಗಿ ನಡೆದುಕೊಂಡಿದ್ದಾರೆ ಎಂದು ಶಾಸಕ ಶ್ರೀರಾಮಲು ಆರೋಪಿಸಿದ್ರು.

ರೇಣುಕಾಚಾರ್ಯ ಆಕ್ರೋಶ

ಶಾಸಕರುಗಳು ಸ್ವಇಚ್ಚೆಯಿಂದ ನೀಡಿದ ರಾಜೀನಾಮೆಯನ್ನ ಸ್ಪೀಕರ್ ಅಂಗೀಕಾರ ಮಾಡಬೇಕಿತ್ತು. ಅವರು ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದ್ದಾರೆ. ಭಾನುವಾರ ಕೆಲಸ ಮಾಡಲ್ಲ ಅಂತ ಹೇಳಿದ್ದರು, ಆದರೆ ತರಾತುರಿಯಲ್ಲಿ ಕೆಲಸ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆಯಾಗಿದ್ದು ಸ್ಪೀಕರ್ ಪೀಠದ ಗೌರವ ಕಡಿಮೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

Intro:Body:

[7/28, 1:02 PM] bhavya banglore: ಬಿಎಸ್ವೈ ನಿವಾಸ...

ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ

ರಾಜ್ಯದಲ್ಲಿ ಪ್ರಜಾತಂತ್ರ ವ್ಯವಸ್ಥೆ ಮತ್ತು ಸಂವಿಧಾನದ ಕಗ್ಗೊಲೆ ಆಗಿದೆ

ಸ್ಪೀಕರ್ ಅವರು ವಿಧಾನಸಭೆಯ ಗೌರವ ಮಣ್ಣುಪಾಲು ಮಾಡಿದಾರೆ

ಅವರ ಮೇಲೆ ನಮಗೆಲ್ಲ ಗೌರವ ಇತ್ತು

ಸ್ಪೀಕರ್ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಶಾಸಕರು ಮತ್ತೊಮ್ಮೆ ಕ್ರಮಬದ್ಧ ರಾಜೀನಾಮೆ ಸಲ್ಲಿಸಿದ್ರು

ಶಾಸಕರ ರಾಜೀನಾಮೆ ಕ್ರಮಬದ್ಧ ಆಗಿದೆ ಅಂರ ಸ್ಪೀಕರ್ ಸಹ ಹೇಳಿದ್ರು

ಈಗ ಸ್ಪೀಕರ್ ಯಾರ ಒತ್ತಡದಿಂದ, ಯಾರ ಆದೇಶದಿಂದ ಅನರ್ಹ ಮಾಡಿದ್ರು

ಇದುವರೆಗೆ ಯಾರೂ ಇಂಥ ಭಂಡ ನಿರ್ಧಾರ ತಗೊಂಡಿರಲಿಲ್ಲ

ಸ್ಪೀಕರ್ ಕಾಂಗ್ರೆಸ್ ಜೆಡಿಎಸ್ ಏಜೆಂಟರಂತೆ ವರ್ಣಿಸಿದ್ದಾರೆ

ಶಾಸಕರಿಗೆ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗಲಿದೆ

ಶಾಸಕ ಶ್ರೀರಾಮಲು ಹೇಳಿಕೆ

ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಹೇಳಿಕೆ 

ಪ್ರಜಾಪ್ರಭುತ್ವ ವಿರುದ್ದವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ

ಕಾಂಗ್ರೆಸ್-ಜೆಡಿಎಸ್ ಕೈಚೀಲವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ

ಸ್ಪೀಕರ್ ಈ ರೀತಿ ನಡೆದುಕೊಳ್ಳುತ್ತಾರೆ ಎಂದು ನಾವು ಎಂದೂ ನಿರೀಕ್ಷಿಸಿರಲಿಲ್ಲ

ಬಿಎಸ್‌ವೈ ನಿವಾಸದ ಬಳಿ ಶಾಸಕ ಪಿ.ರಾಜೀವ್  ಮಾತಾಡಿ

ರಮೇಶ್ ಕುಮಾರ್ ಹೋಲ್ ಸೇಲ್ ಆಗಿ ಅನರ್ಹ ಮಾಡಿರೋದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ.ಇದು ಸಂವಿಧಾನಕ್ಕೆ ಮಾಡಿರೋ ಅಪಚಾರ.ಇನ್ನೊಬ್ಬರ ಇಚ್ಛೆಗೆ ಅನುಸಾರವಾಗಿ ಅವ್ರನ್ನ ಬಳಸಿಕೊಂಡಿದ್ದಾರೆ ಸುಪ್ರೀಂ ಆದೇಶವನ್ನ ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ.ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಆಯ್ಕೆ ಆಗೋ ಬೇರೆಯವ್ರಿಗೆ ಅವಕಾಶವಿಲ್ಲ

ಜನರಿಂದ ಆಯ್ಕೆಯಾದ್ರೂ ಅವರ ಅಣತಿಗೆ ಕುಣಿಯುವಂತವರಿಗೆ ಕಾಲ ಅನ್ನೋದು ಮತ್ತೆ ಪ್ರೂ ಆಗಿದೆ ಎಂದ್ರು. 

ಹಾಗೆ ಬಿಎಸ್‌ವೈ ನಿವಾಸದ ಬಳಿ  ರೇಣುಕಾರ್ಚಾಯ ಪ್ರತಿಕ್ರಿಯೆ ನೀಡಿ ಶಾಸಕರುಗಳು ಸ್ವಇಚ್ಚೆಯಿಂದ ನೀಡಿದ ರಾಜೀನಾಮೆಯನ್ಮ ಸ್ಪೀಕರ್  ಅಂಗೀಕಾರ ಮಾಡಬೇಕಿತ್ತು.ಸ್ಪೀಕರ್ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದ್ದಾರೆ.ಭಾನುವಾರ ಕೆಲಸ ಮಾಡಲ್ಲ ಅಂತ ಹೇಳಿದ್ರುಆದರೆ ತಾರತುರಿಯಲ್ಲಿ ಕೆಲಸ ಮಾಡಿದ್ದಾರೆ

ಪ್ರಜಾಪ್ರಭುತ್ವ ಕಗ್ಗೊಲೆ ಯಾಗಿದ್ದು ಸ್ಪೀಕರ್ ಪೀಠದ ಗೌರವ ಕಡಿಮೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.