ದೇವನಹಳ್ಳಿ (ಬೆಂ.ಗ್ರಾ): ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಎ.ನಾರಾಯಣಸ್ವಾಮಿ ರಾಜ್ಯಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ದೊರಕಿದೆ.
ಬಳಿಕ ಮಾತನಾಡಿದ ಅವರು, ಹಲವು ದಿನಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷದ ಸಾಧನೆಯನ್ನು ಜನರಿಗೆ ತಲುಪಿಸಬೇಕಿದೆ. ನಮ್ಮ ಪಕ್ಷದ ಸಿದ್ಧಾಂತಗಳ ಅನುಗುಣವಾಗಿ ನಾಯಕರ ಸಹಕಾರ ಬೆಂಬಲದೊಂದಿಗೆ ಒಳ್ಳೆಯ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸೇಬಿಗಾಗಿ ಮುಗಿಬಿದ್ದ ಜನತೆ
ನೂರಾರು ಕೆ.ಜಿ ತೂಕದ ಸೇಬಿನ ಹಾರವನ್ನು ಕ್ರೇನ್ ಮೂಲಕ ಸಚಿವರಿಗೆ ಹಾಕುವ ವೇಳೆ ನೂಕುನುಗ್ಗಲು ಉಂಟಾಯಿತು. ಜನರು ಹಾರದಿಂದ ಕೈಗೆ ಸಿಕ್ಕಿದ್ದಷ್ಟು ಸೇಬುಗಳನ್ನು ಕಿತ್ತುಕೊಳ್ಳಲು ಯುತ್ನಿಸಿದ ಪರಿಣಾಮ ಗೊಂದಲ ಸೃಷ್ಟಿಯಾಯಿತು.