ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 13 ರಿಂದ 14 ಸ್ಥಾನ ಗೆಲ್ಲುತ್ತೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ಗೆ ಗೋಪಿನಾಥ್ ರೆಡ್ಡಿ ಆಯ್ಕೆಯಾಗಿದ್ದಾರೆ. ಬಹಳ ಸಂತೋಷದ ವಿಚಾರ. ನಮ್ಮ ಕಾರ್ಯಕರ್ತರು, ಮುಖಂಡರಿಗೆ ಶುಭಾಶಯಗಳನ್ನ ಕೋರುತ್ತೇವೆ. ಒಳ್ಳೆಯ ಸಂದೇಶ ಹಾಗೂ ಪರಿಷತ್ನಲ್ಲಿ ಹೆಚ್ಚಿನ ಸಂಖ್ಯೆ ಪಡೆದು ಹೊಸ ಹೊಸ ಯೋಜನೆ ಹಾಗೂ ಕಾಯ್ದೆಗಳನ್ನ ತರಲು ಪೂಕರವಾಗಿದೆ ಎಂದರು.
ಇದನ್ನೂ ಓದಿ: ಪರಿಷತ್ ಫಲಿತಾಂಶ : 'ಕೈ' ಕೆಡವಿ ಗೆದ್ದ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ
ಜನರ ಇಚ್ಛೆಗೆ ಪೂರಕವಾದ ಆಡಳಿತ ಕೊಡಲು ಮಾಡಿದ ಸಹಕಾರಕ್ಕೆ ಹಾಗೂ ಬೆಂಬಲಕ್ಕೆ ಶುಭಾಶಯಗಳನ್ನ ತಿಳಿಸುವೆ ಎಂದು ಇದೇ ವೇಳೆ ಅಶ್ವತ್ಥ್ ನಾರಾಯಣ್ ತಿಳಿಸಿದರು.