ETV Bharat / state

ಬಿಜೆಪಿಯಿಂದ ವೋಟಿಗೆ ಕನ್ನ ಹಾಕುವ ಕೆಲಸವಾಗುತ್ತಿದೆ: ಶಾಸಕ ಟಿ ವೆಂಕಟರಮಣಯ್ಯ - BJP is trying to steal the voters

ಬೆಂಗಳೂರಿನ ಬಿಬಿಎಂಪಿ ವಾರ್ಡ್​ಗಳಲ್ಲಿ 15 ರಿಂದ 20 ಸಾವಿರ ಮತದಾರರನ್ನ ಪಟ್ಟಿಯಿಂದ ತೆಗೆದು, ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುವ ಕೆಲಸವಾಗಿದೆ ಎಂದು ಶಾಸಕ ಟಿ ವೆಂಕಟರಮಣಯ್ಯ ಹೇಳಿದ್ದಾರೆ.

BJP
ಟಿ ವೆಂಕಟರಮಣಯ್ಯ
author img

By

Published : Dec 4, 2022, 7:59 PM IST

ದೊಡ್ಡಬಳ್ಳಾಪುರ: ಜನರು ಹಸಿವಿಗಾಗಿ ಪಿಕ್ ಪಾಕೆಟ್ ಮಾಡಿರೋದನ್ನು ನೋಡಿದ್ದೇವೆ. ಆದರೆ ಬಿಜೆಪಿ ವೋಟಿಗೆ ಕನ್ನ ಹಾಕುವ ಕೆಲಸ ಮಾಡಿದೆ. ದೊಡ್ಡಬಳ್ಳಾಪುರ ತಾಲೂಕಿನ ಮತದಾರರ ಪಟ್ಟಿಯಲ್ಲೂ ಸಣ್ಣಪುಟ್ಟ ವ್ಯತ್ಯಾಸವಾಗಿದೆ ಎಂಬ ಸಂಶಯವನ್ನು ಶಾಸಕ ಟಿ ವೆಂಕಟರಮಣಯ್ಯ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಬಿಜೆಪಿ ಬೆಂಗಳೂರಿನ ಬಿಬಿಎಂಪಿ ವಾರ್ಡ್​ಗಳಲ್ಲಿ 15 ರಿಂದ 20 ಸಾವಿರ ಮತದಾರರನ್ನು ಪಟ್ಟಿಯಿಂದ ತೆಗೆದು, ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ಶಾಸಕ ಟಿ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ ತಾಲೂಕಿನಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಮತದಾರರ ವಾರ್ಡ್​ಗಳನ್ನು ಬದಲಾಯಿಸಿರುವ ಆರೋಪ ಕೇಳಿಬಂದಿದೆ. ಒಂದೇ ಕುಟುಂಬದವರನ್ನು ಬೇರೆ ಬೇರೆ ವಾರ್ಡ್​ಗಳಿಗೆ ಸ್ಥಳಾಂತರ ಮಾಡಲಾಗಿದೆ. ಉಳಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ 10 ರಿಂದ 20 ಮತದಾರರು ಪಟ್ಟಿಯಿಂದ ನಾಪತ್ತೆಯಾಗಿರುವ ಆರೋಪ ಕೇಳಿ ಬಂದಿದೆ. ನಿಖರವಾದ ಮಾಹಿತಿ ಸಂಗ್ರಹಿಸಿ ರಾಜ್ಯ ಮತ್ತು ಕೇಂದ್ರ ಚುನಾವಣಾ ಅಯೋಗಕ್ಕೆ ದೂರು ನೀಡಲಾಗುವುದು ಎಂದರು.

ಇದನ್ನೂ ಓದಿ: ಎಂ ಬಿ ಪಾಟೀಲ್​ ವಿರುದ್ಧ ಸಿ ಟಿ ರವಿ ತಿರುಗೇಟು.. ಸವಾಲು ಸ್ವೀಕರಿಸಲು ಸಿದ್ಧವೆಂದು ಟಾಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.