ETV Bharat / state

ಕ್ರಷರ್ ಲಾರಿಯ ಧೂಳಿನಿಂದ ದಾರಿ ಕಾಣದೆ ಕಾರಿಗೆ ಬೈಕ್ ಡಿಕ್ಕಿ, ಸವಾರ ಸಾವು - ಕಾರಿಗೆ ಬೈಕ್ ಡಿಕ್ಕಿ ಸವಾರ ಸಾವು

ಕ್ರಷರ್ ಲಾರಿ ಸಂಚಾರದಿಂದ ಧೂಳು ಸಂಪೂರ್ಣ ಆವರಿಸಿದ ಪರಿಣಾಮ ರಸ್ತೆ ಕಾಣದೆ, ಎದುರು ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

Bike -car collision
ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು
author img

By

Published : Dec 14, 2019, 6:25 PM IST

ನೆಲಮಂಗಲ : ಜಲ್ಲಿಕಲ್ಲು ತುಂಬಿದ ಕ್ರಷರ್ ಲಾರಿಯ ಹಿಂದೆಯ ಹೋಗುತ್ತಿದ್ದ ಬೈಕ್​ಗೆ ಧೂಳು ಅವರಿಸಿದ ಪರಿಣಾಮ ದಾರಿ ಕಾಣದೆ, ಎದುರಿಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಮಾಕೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅರೇಗುಜ್ಜನಹಳ್ಳಿ ಮೂಲದ ರವಿಕುಮಾರ್ ( 18 ) ಮೃತ ದುರ್ದೈವಿ. ಬೈಕ್ ಹಿಂಬದಿ ಕುಳಿತ್ತಿದ್ದ ದಿನೇಶ್( 18 ) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ನಂತರ ಸ್ಥಳೀಯರು ಕ್ರಷರ್ ಲಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕ್ರಷರ್ ಲಾರಿಯ ಧೂಳಿನಿಂದ ದಾರಿ ಕಾಣದೆ ಕಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವು
Body:ನೆಲಮಂಗಲ : ಜಲ್ಲಿಕಲ್ಲು ತುಂಬಿದ ಲಾರಿಯ ಹಿಂದೆಯ ಹೋಗುತ್ತಿದ್ದ ಬೈಕ್ ಗೆ ಜಲ್ಲಿಕಲ್ಲಿನ ಧೂಳು ಅವರಿಸಿದ ಪರಿಣಾಮ ದಾರಿ ಕಾಣದೆ ಎದುರಿಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕೇನಹಳ್ಳಿ ಗ್ರಾಮದ ಬಳಿ ಅಪಘಾತ ನಡೆದಿದ್ದು.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅರೇಗುಜ್ಜನಹಳ್ಳಿ ಮೂಲದ ರವಿಕುಮಾರ್ ( 18 ) ಸಾವನ್ನಪ್ನಿದ್ದಾನೆ.
ಬೈಕ್ ಹಿಂಬದಿ ಕುಳಿತ್ತಿದ್ದ ದಿನೇಶ್( 18 ) ಗಂಭೀರ ಗಾಯಾಗೊಂಡಿದ್ದು ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಾಕೇನಹಳ್ಳಿಯ ಕ್ರಷರ್ ಗಳಿಂದ ಜಲ್ಲಿಕಲ್ಲು ತುಂಬಿರೋ ಲಾರಿಗಳು ಧೂಳೆಬ್ಬಿಸಿಕೊಂಡು ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆಯಲ್ಲಿ ಸಂಚಾರಿಸುವುದು ಕಷ್ಟವಾಗಿದ್ದು ಇದರಿಂದ ಹಲವು ಅವಘಾತಗಳ ಸಂಭವಿಸಿದೆ. ಕ್ರಷರ್ ಲಾರಿ ಸಂಚಾರದಿಂದ ಧೂಳು ಸಂಪೂರ್ಣ ಆವರಿಸಿದ ಪರಿಣಾಮ ರಸ್ತೆ ಕಾಣದೆ ಎದುರು ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಘಟನೆ ನಂತರ ಸ್ಥಳೀಯರು ಕ್ರಷರ್ ಲಾರಿ ತಡೆದು ಪ್ರತಿಭಟನೆ ನಡೆಸಿದರು ಇದರಿಂದ 2 ಕಿ.ಮೀಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯ್ತು.
ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಟ್ : ಮಂಜುನಾಥ್ , ಮೃತ ರವಿಕುಮಾರ್ ಸಂಬಂಧಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.