ETV Bharat / state

ಹೇ, 'ಶ್ರೀನಿವಾಸ'! ಒಂದೊಂದು ಫೈಲ್‌ಗೂ ಒಂದೊಂದು ರೇಟ್‌ ಫಿಕ್ಸ್.. ಬೆಸ್ಕಾಂ ಅಧಿಕಾರಿಯ ಲಂಚಾವತಾರ ಬಯಲು - ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್ ಮಂತ್ರೋಡಿ ಲಂಚಾವತಾರ

ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ (ಎಇಇ) ಶ್ರೀನಿವಾಸ್ ಮಂತ್ರೋಡಿಗೆ ಲಂಚ ತೆಗೆದುಕೊಳ್ಳುವ ದೃಶ್ಯ ಸೆರೆಯಾಗಿದೆ. ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಅಧಿಕಾರಿಯ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Bescom Officer Bribery in Devanhalli
ಬೆಸ್ಕಾಂ ಅಧಿಕಾರಿಯ ಲಂಚಾವತಾ
author img

By

Published : Jul 2, 2021, 5:04 PM IST

Updated : Jul 2, 2021, 7:12 PM IST

ದೇವನಹಳ್ಳಿ: ದೇವನಹಳ್ಳಿ ಬೆಸ್ಕಾಂ ಕಚೇರಿಯಲ್ಲಿ ಹಣ ಕೊಡದೆ ಯಾವುದೇ ಫೈಲ್‌ಗೆ ಅಧಿಕಾರಿಗಳು ಸಹಿ ಹಾಕೋದಿಲ್ಲ ಅನ್ನೋ ಆರೋಪಕ್ಕೆ ಮತ್ತೊಮ್ಮೆ ಆಧಾರ ದೊರೆತಿದೆ.

ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್ ಮಂತ್ರೋಡಿಗೆ ಲಂಚ ತೆಗೆದುಕೊಳ್ಳುವ ದೃಶ್ಯ ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದ್ರ ಜೊತೆಗೆ ಅಧಿಕಾರಿಯ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂ ಅಧಿಕಾರಿಯ ಲಂಚಾವತಾರ

ಎಇಇ ಶ್ರೀನಿವಾಸ್ ಮಂತ್ರೋಡಿ ಕಚೇರಿಯಲ್ಲಿ ತನಗೆ ಆಪ್ತರನ್ನು ವಿದ್ಯುತ್ ಗುತ್ತಿಗೆದಾರರನ್ನಾಗಿ ಇಟ್ಟು ಕೊಂಡಿದ್ದಾರೆ. ಇವರ ಹೊರತು ಬೇರೆ ವಿದ್ಯುತ್ ಗುತ್ತಿಗೆದಾರರ ಬಳಿ ರೈತರು ಹೋದರೆ ಫೈಲ್‌ಗೆ ಸಹಿ ಹಾಕೋದಿಲ್ಲ. ಅಧಿಕಾರಿ ಲಂಚಾವತಾರದಿಂದ ರೋಸಿ ಹೋಗಿದ್ದ ರೈತರು ಲಂಚ ತೆಗೆದುಕೊಳ್ಳುವ ದೃಶ್ಯವನ್ನು ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಪ್ರತಿಯೊಂದು ಫೈಲ್ ಸಹಿಗೂ ಇಂತಿಷ್ಟೇ ಹಣ ನಿಗದಿ!

  • 1 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 300 ರೂ.
  • 2 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 600 ರೂ.
  • 3-4 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 1200 ರೂ
  • ರೈತರ ತೋಟದಲ್ಲಿ ಒಂದು ಕಂಬ ಹಾಕಲು 1000 ರೂ.
  • ಮೂರು ಕಂಬ ಹಾಕಿದ್ರೆ 3000 ಸಾವಿರ
  • 25 ವ್ಯಾಟ್ ಟ್ರಾನ್ಸ್ಪಾರ್ಮರ್ಗೆ 5000 ಸಾವಿರ
  • 100 ವ್ಯಾಟ್ ಟ್ರಾನ್ಸ್ಪಾರ್ಮ್ ಗೆ 15 ಸಾವಿರ ಲಂಚ ನೀಡಿದ್ರೆ ಮಾತ್ರ ಕಡತಕ್ಕೆ ಸಹಿ ಹಾಕಲಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ : ‘ಮುಂದಿನ ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ’ - ಶಾಸಕರ ಪುತ್ರಿ ಮದುವೆಯಲ್ಲಿ ಕೈ ಕಾರ್ಯಕರ್ತರ ಘೋಷಣೆ

Last Updated : Jul 2, 2021, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.