ನೆಲಮಂಗಲ: ಮಗು ಮತ್ತು ಬಾಣಂತಿಯನ್ನು ಟಾಟಾ ಏಸ್ ವಾಹನದಲ್ಲಿ ಕಳುಹಿಸುವ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆ ವೈದ್ಯರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕನಸವಾಡಿ ಗ್ರಾಮದ ಮಹಿಳೆ ಹೆರಿಗೆಗೆಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಹೆರಿಗೆಯ ನಂತರ ಆಸ್ಪತ್ರೆ ವೈದ್ಯರು ಬಾಣಂತಿ ಮಹಿಳೆ ಹಾಗೂ ನವಜಾತ ಶಿಶುವನ್ನು ಸಾಮಾಗ್ರಿಗಳನ್ನು ಸಾಗಿಸುವ ಟಾಟಾ ಏಸ್ ವಾಹನದಲ್ಲಿ ಕಳುಹಿಸಿ ನಿರ್ಲಕ್ಷ್ಯ ತೋರಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಜವಾಬ್ದಾರಿಯನ್ನ ಸರ್ಕಾರವೇ ವಹಿಸಿದ್ದು. ಸುರಕ್ಷಿತವಾಗಿ ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸುವ ಸಲುವಾಗಿ ನಗು-ಮಗು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಇದೆ. ಅದರೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆ ಇದ್ದರೂ ಮಗು ಮತ್ತು ಬಾಣಂತಿಯನ್ನು ಟಾಟಾಏಸ್ ವಾಹನದಲ್ಲಿ ಕಳುಹಿಸಿದ್ದು ಕಂಡ ಸಾರ್ವಜನಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.