ನೆಲಮಂಗಲ: ಬೀಗರ ಊಟಕ್ಕೆಂದು ಹೊರಟ್ಟಿದ್ದವರನ್ನು ಹಿಂಬಾಲಿಸಿ ಕಾರ್ ಗ್ಲಾಸ್ ಒಡೆದು 8.7 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ನೆಲಮಂಗಲದ ಹೊರ ವಲಯದಲ್ಲಿ ನಡೆದಿದೆ.
ನೆಲಮಂಗಲ ಸಮೀಪದ ಕಡಬಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ತಾವರೆಕೆರೆ ಮೂಲದ ಶ್ರೀನಿವಾಸ ರೆಡ್ಡಿ ಎಂಬುವವರು ಬೀಗರ ಔತಣಕೂಟಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.
ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿದ್ದನ್ನ ಗಮನಿಸಿ, ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಸ್ಕಾರ್ಪಿಯೋ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದ 8.7 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.