ದೊಡ್ಡಬಳ್ಳಾಪುರ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ದೊಡ್ಡಬಳ್ಳಾಪುರ ಪೊಲೀಸರು ಏಕತಾ ಓಟ ಮತ್ತು ಪಂಜಿನ ಮೆರವಣಿಗೆ ನಡೆಸಿದರು.
ಏಕತಾ ದಿನದ ಅಂಗವಾಗಿ ಬೆಳಗ್ಗೆ ಏಕತಾ ಓಟ ಅಯೋಜನೆ ಮಾಡಲಾಗಿತ್ತು. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಏಕತಾ ಓಟಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜೊತೆಗೆ ತಾವು ಸಹ ಓಡಿ ಓಟಗಾರರನ್ನು ಹುರಿದುಂಬಿಸಿದರು. ಇನ್ನು ಸಂಜೆಯ ಹೊತ್ತಿಗೆ ಪಂಜಿನ ಮೆರವಣಿಗೆ ವೈಭವ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕಳೆ ಕಟ್ಟಿತು.
ದೊಡ್ಡಬಳ್ಳಾಪುರ ನಗರ ಠಾಣೆಯಿಂದ ಶುರುವಾದ ಪಂಜಿನ ಮೆರವಣಿಗೆ ಡಿಕ್ರಾಸ್ ವೃತ್ತ, ಮಾನಸ ಹಾಸ್ಪಿಟಲ್ , ಕೋರ್ಟ್ ರಸ್ತೆಯ ಮೂಲಕ ಹಾದು ಪ್ರವಾಸಿ ಮಂದಿರ ಸರ್ಕಲ್ ಮೂಲಕ ಸಾಗಿ ಏಕತಾ ದಿನದ ಮಹತ್ವ ಜನರಿಗೆ ತಿಳಿಸಿದರು. ಮೆರವಣಿಗೆಯಲ್ಲಿ ಬೋಲೋ ಭಾರತ್ ಮಾತಕಿ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು.
ಏಕತಾ ದಿನವನ್ನು ದೊಡ್ಡಬಳ್ಳಾಪುರ ಪೊಲೀಸರು ಜನರೊಂದಿಗೆ ಬೆರತು ಆಚರಿಸುವ ಮೂಲಕ ಜನಸ್ನೇಹಿ ವಾತವರಣವನ್ನು ಉಂಟುಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.