ETV Bharat / state

ಬೆಂಗಳೂರು ಗ್ರಾಮಾಂತರ ಜಿಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ: ರಾಜೀನಾಮೆ ನೀಡಲ್ಲ ಎಂದ ಜಯಮ್ಮ - Bangalore Rural District Panchayat

ಉಳಿದ 5 ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ಆಯ್ಕೆಯ ಉದ್ದೇಶವಾದರು ಏನು? ಕೊರೊನಾ ಕಾಲದಲ್ಲಿ ಹೊಸ ಅಧ್ಯಕ್ಷರಾಗಿ ಬರುವರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವೇ ಎನ್ನುವುದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಅವರ ಪ್ರಶ್ನೆಯಾಗಿದೆ.

zp president jayamma lakshminarayana
ಬೆಂಗಳೂರು ಗ್ರಾ. ಜಿ.ಪಂ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ ನಿರ್ಣಯ; ರಾಜೀನಾಮೆ ಕೊಡುವುದಿಲ್ಲವೆಂದ ಅಧ್ಯಕ್ಷೆ
author img

By

Published : Oct 7, 2020, 7:00 AM IST

ದೇವನಹಳ್ಳಿ: ಅಕ್ಟೋಬರ್ 14ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಆದರೆ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ರಾಜೀನಾಮೆ ಕೊಡಲು ನಿರಾಕರಿಸಿದ್ದು, ಉಳಿದ ಐದು ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ಆಯ್ಕೆಯ ಅಗತ್ಯವಾದರು ಏನು? ತಮ್ಮದೇ ತಾಲೂಕಿನ ಮಹಿಳೆಗೆ ಅಧ್ಯಕ್ಷ ಸ್ಥಾನ ಬೇಕೆನ್ನುವ ಬದಲಿಗೆ ಶಾಸಕರಾದ ಟಿ.ವೆಂಕಟರಮಣಯ್ಯ ಹೊಸಕೋಟೆ ತಾಲೂಕಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಉತ್ಸಾಹ ಹೊಂದಿದ್ದಾರೆಂದು ಜಯಮ್ಮ ಲಕ್ಷ್ಮೀನಾರಾಯಣ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದು, 21 ಕ್ಷೇತ್ರಗಳಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು. ಬಿಸಿಎಂ ವರ್ಗಕ್ಕೆ ಅಧ್ಯಕ್ಷ ಸ್ಥಾನ ಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸೂಲಿಬೆಲೆ ಕ್ಷೇತ್ರದ ವಿ.ಪ್ರಸಾದ್, ನಂದಗುಡಿ ಕ್ಷೇತ್ರದ ನಾಗರಾಜ್ ಮತ್ತು ಸಾಸಲು ಕ್ಷೇತ್ರದ ಜಯಮ್ಮ ಲಕ್ಷ್ಮೀನಾರಾಯಣ ಅಧ್ಯಕ್ಷ ಸ್ಥಾನದ ಅಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ ಮತ್ತು ಕೃಷ್ಣಬೈರೇಗೌಡ ತೀರ್ಮಾನದಂತೆ ಮೊದಲ ಎರಡು ವರ್ಷ ಒಬ್ಬರಿಗೆ ಹಾಗೆಯೇ ಮೂರು ವರ್ಷಗಳ ಅವಧಿ ಎರಡನೇ ಅಧ್ಯಕ್ಷರಿಗೆ ತಿರ್ಮಾನವಾಗಿತ್ತು. ವರಿಷ್ಠರ ತೀರ್ಮಾನದಂತೆ ಸೂಲಿಬೆಲೆ ಕ್ಷೇತ್ರದ ವಿ.ಪ್ರಸಾದ್ ಮೊದಲ ಅವಧಿಯಲ್ಲಿ ಅಧ್ಯಕ್ಷರಾದರು. ಎರಡನೇ ಅವಧಿಯಲ್ಲಿ ಸಾಸಲು ಕ್ಷೇತ್ರದ ಜಯಮ್ಮ ಲಕ್ಷ್ಮೀನಾರಾಯಣ ಅಧ್ಯಕ್ಷಗಾದಿ ಏರಿದ್ರು. ಆದರೀಗ ಜಯಮ್ಮ ಲಕ್ಷ್ಮೀನಾರಾಯಣ ವಿರುದ್ಧ ಅವಿಶ್ವಾಸ ನಿರ್ಣಯ ಕೈಕೊಳ್ಳಲಾಗಿದೆ. ಕೇವಲ 5 ತಿಂಗಳ ಅವಧಿ ಮಾತ್ರ ಉಳಿದಿದ್ದು, ಕೋವಿಡ್ ಸಮಯದಲ್ಲಿ ಅಧ್ಯಕ್ಷರನ್ನು ಬದಲಾಯಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ

ಎರಡನೇ ಬಾರಿ ಅಧ್ಯಕ್ಷಗಾದಿ ಏರಲು ವಿ.ಪ್ರಸಾದ್ ಯತ್ನ: ಈಗಾಗಲೇ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ 30 ತಿಂಗಳು ಪೂರೈಸಿರುವ ವಿ.ಪ್ರಸಾದ್ ಎರಡನೇ ಬಾರಿ ಅಧ್ಯಕ್ಷರಾಗಲು ಪ್ರಯತ್ನ ನಡೆಸಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆನ್ನುವ ಕಾರಣಕ್ಕೆ ವಿ.ಪ್ರಸಾದ್​ಗೆ ಅಧ್ಯಕ್ಷ ಸ್ಥಾನ ಕೊಡಿಸಲು ಮಾಜಿ ಸಚಿವ ಕೃಷ್ಣಬೈರೇಗೌಡ ಸಹ ಒಪ್ಪಿಗೆ ನೀಡಿದ್ದಾರೆ. ಆದರೆ ಹಾಲಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಒಪ್ಪಂದದ ಪ್ರಕಾರ ಎರಡನೇ ಅವಧಿಯನ್ನು ನಾನೇ ಪೂರ್ಣಗೊಳಿಸುವುದಾಗಿ ವರಿಷ್ಠರಲ್ಲಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲವೆಂದು ಹೇಳಿದ್ದಾರೆ.

ಮೊದಲ ಅವಧಿಯಲ್ಲಿ ಅಧ್ಯಕ್ಷರಾದ ವಿ.ಪ್ರಸಾದ್ ಅವಧಿ ಕೇವಲ ಎರಡು ವರ್ಷವಾಗಿತ್ತು. ಆದರೆ ಕೋರ್ಟ್ ಮೊರೆ ಹೊಗಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ವಿ.ಪ್ರಸಾದ್ 30 ತಿಂಗಳ ಅಧಿಕಾರ ಅನುಭವಿಸಿದ್ದಾರೆ. ಇದೀಗ ಮತ್ತೆ ಅಧ್ಯಕ್ಷರಾಗುವ ಕಾರಣಕ್ಕೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡಿದ್ದಾರೆಂದು ಜಯಮ್ಮ ಲಕ್ಷ್ಮೀನಾರಾಯಣ ತಮ್ಮ ನೋವು ತೋಡಿಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಸಹ ದೊಡ್ಡಬಳ್ಳಾಪುರ ತಾಲೂಕಿನವರು. ಆದರೆ ದೊಡ್ಡಬಳ್ಳಾಪುರ ಶಾಸಕರಿಗೆ ತಮ್ಮ ತಾಲೂಕಿಗೆ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಬೇಕೆನ್ನುವ ಕಾಳಜಿಯೇ ಇಲ್ಲ. ಅದರ ಬದಲಾಗಿ ಹೊಸಕೋಟೆ ತಾಲೂಕಿನ ವಿ.ಪ್ರಸಾದ್​​ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಉತ್ಸಾಹದಿಂದ ಓಡಾಡುತ್ತಿದ್ದಾರೆ. ಶಾಸಕರು ಸಹ ರಾಜೀನಾಮೆ ಕೊಡುವಂತೆ ಹೇಳಿದ್ದಾರೆ. ಆದರೆ ನಾನು ರಾಜೀನಾಮೆ ಕೊಡುವುದಿಲ್ಲ. ಎಲ್ಲಾ ಸದಸ್ಯರ ವಿಶ್ವಾಸ ನನಗಿದೆ ಎಂದು ಜಯಮ್ಮ ಲಕ್ಷ್ಮೀನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.