ETV Bharat / state

ಮೂರೆಕರೆಯಲ್ಲಿ ಡ್ರ್ಯಾಗನ್ ಫ್ರೂಟ್‌​ ಬೆಳೆದು ಕೈ ತುಂಬ ಸಂಪಾದನೆ: ಸಹೋದರರ ಕೃಷಿ ಖುಷಿ!

ಐದು ವರ್ಷಗಳಿಂದ ಕಷ್ಟಪಟ್ಟು ಡ್ರ್ಯಾಗನ್ ಹಣ್ಣುಗಳ ಕೃಷಿ​ ಮಾಡುತ್ತಿರುವ ಈ ಸಹೋದರರು ಇದೀಗ ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ.

Brothers  dragon crop
ಡ್ರ್ಯಾಗನ್ ಬೆಳೆದ ಸಹೋದರರು
author img

By

Published : Dec 6, 2022, 8:26 PM IST

Updated : Dec 6, 2022, 9:59 PM IST

ಯಲಹಂಕ: ಬೆಂಗಳೂರು ನಗರ ಬೆಳೆಯುತ್ತಿದ್ದಂತೆ ಅಕ್ಕಪಕ್ಕ ಇದ್ದ ಕೃಷಿ ಭೂಮಿಗಳನ್ನು ಬಡಾವಣೆಗಳಾಗಿ ಪರಿವರ್ತಿಸಿ ನಿವೇಶನ ಮಾಡಿ ಹಣ ಮಾಡಿಕೊಂಡಿರುವ ಜನರು ಹೆಚ್ಚು. ಆದ್ರೆ ಇದೇ ನಗರದ ಇಬ್ಬರು ಸಹೋದರರು ತಮ್ಮ ಭೂಮಿಯ ಸುತ್ತೆಲ್ಲ ಸೈಟ್​ಗಳಾಗಿ ಮಾರಾಟವಾಗುತ್ತಿದ್ದರೂ ತಲೆಕೆಡಿಸಿಕೊಳ್ಳದೇ ತಮ್ಮ ಜಮೀನಿನಲ್ಲಿ ಕೃಷಿ ಮಾಡಿ ಕೈ ತುಂಬ ಹಣ ಸಂಪಾದನೆ ಮಾಡುತ್ತಿದ್ದಾರೆ.

ಯಲಹಂಕ ತಾಲೂಕಿನ ಹಾರೋಹಳ್ಳಿ ಗ್ರಾಮದ ಶ್ರೀನಿವಾಸ್ ​ರೆಡ್ಡಿ ಹಾಗೂ ವೇಣುಗೋಪಾಲ್​ ರೆಡ್ಡಿ ತಮ್ಮ ಬೆಲೆ ಬಾಳುವ ಜಮೀನಿನಲ್ಲಿ ಅಮೆರಿಕ ಮೂಲದ ಡ್ರ್ಯಾಗನ್​ ಹಣ್ಣು ಬೆಳೆಯುತ್ತಿದ್ದಾರೆ. ಹಿಂದಿನಿಂದಲೂ ಈ ಸಹೋದರರ ಕುಟುಂಬ ಕೃಷಿಯನ್ನೇ ನೆಚ್ಚಿಕೊಂಡಿದೆ. ಶ್ರೀನಿವಾಸ್ ​ರೆಡ್ಡಿ ಅವರ ತಂದೆ ಈ ಹಿಂದೆ ತಮ್ಮ 9 ಎಕರೆ ಜಮೀನಿನಲ್ಲಿ ಸೀಬೆ ಹಣ್ಣು, ಕಬ್ಬು ಬೆಳೆಯುತ್ತಿದ್ದರು. ಆದ್ರೆ ಕಾಲ ಕ್ರಮೇಣ ಈ ಕೃಷಿಯಲ್ಲಿ ಹೇಳಿಕೊಳ್ಳುವ ಲಾಭ ಸಿಗದೇ ತಕ್ಕಮಟ್ಟಕ್ಕೆ ಜೀವನ ನಡೆಸುತ್ತಿದ್ರಂತೆ. ಕಾಲಾ ನಂತರದಲ್ಲಿ ಬೆಳೆ ಬದಲಾಯಿಸಲು ತೀರ್ಮಾನಿಸಿದ ಈ ಸಹೋದರರು ಬ್ಲೂದ್ರಾಕ್ಷಿಯನ್ನು 12 ವರ್ಷಗಳ ಕಾಲ ಬೆಳೆದಿದ್ದರು.

ಸಹೋದರರ ಕೃಷಿ ಖುಷಿ

ಕಪ್ಪು ದ್ರಾಕ್ಷಿಯಲ್ಲಿ ಅಷ್ಟೇನೂ ಲಾಭ ಸಿಗಲಿಲ್ಲ. ಮಳೆ ಬಂದ್ರೆ ಸಾಕು ದಿನನಿತ್ಯ ಔಷಧಿ ಸಿಂಪಡಣೆ, ನಿರ್ವಹಣೆ ಕಷ್ಟವಾಗುತ್ತಿತ್ತು. ಇದರಿಂದ ಬೇಸತ್ತ ಇವರು 2016 ರಲ್ಲಿ ಬೇರೆ ಏನಾದರೂ ಬೇರೆ ಕೃಷಿ ಮಾಡಿ ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡರಂತೆ. ಪ್ರತಿದಿನ ವಾಯುವಿಹಾರಕ್ಕೆ ಜಿಕೆವಿಕೆ ಕ್ಯಾಂಪಸ್​ನಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ​ರೆಡ್ಡಿ ಅಲ್ಲಿನ ಡ್ರ್ಯಾಗನ್​ ಹಣ್ಣಿನ ಗಿಡ ಕಂಡು ಇದನ್ನೇ ತಮ್ಮ ಜಮೀನಿನಲ್ಲಿ ಬೆಳೆಯಲು ತೀರ್ಮಾನಿಸಿದ್ದರಂತೆ.

ಎರಡು ತಿಂಗಳಲ್ಲಿ ಒಂದು ಎಕರೆ ಜಾಗವನ್ನು ಡ್ರಾಗನ್​ ಹಣ್ಣಿನ ಗಿಡಗಳನ್ನು ಬೆಳೆಯಲು ರೆಡಿ ಮಾಡಿಕೊಳ್ತಾರೆ. ಡ್ರ್ಯಾಗನ್​ ಗಿಡಕ್ಕೆ ಬೇಕಾಗುವ ಕಂಬಗಳು, ಒಂದು ಗಿಡಕ್ಕೆ 8 ಅಡಿ ಅಗಲ ಅಂತರವಿಟ್ಟು​ ಹದ ಮಾಡಿಕೊಳ್ತಾರೆ. 9 ಅಡಿ ಅಗಲ, 9 ಅಡಿ ಉದ್ದ ರೀತಿಯ ಕಂಬಗಳನ್ನು ನೆಟ್ಟು 2018 ರಲ್ಲಿ ಮೊದಲ ಬೆಳೆಯಾಗಿ ಸುಮಾರು ಒಂದೂವರೆ ಸಾವಿರ ಡ್ರ್ಯಾಗನ್​ ಗಿಡಗಳನ್ನು ತಂದು ನೆಟ್ಟಿದ್ದಾರೆ. ಕಂಬಗಳನ್ನು ಹಾಕಿರುವ ಲೈನ್​ಗೆ ಮಣ್ಣಿನ ದಿಬ್ಬ ಮಾಡಿದ್ದು, ಪಕ್ಕದಲ್ಲಿ ಮಳೆ ನೀರು ಸರಾಗವಾಗಿ ಹೋಗಲು ಬಿಟ್ಟಿದ್ದಾರೆ.

ಇನ್ನೂ ಒಂದು ಎಕರೆಗೆ ಸುಮಾರು 500 ಕಂಬಗಳನ್ನೂ ಹಾಕಲಾಗಿದೆ. ಈ ಕಂಬಗಳಲ್ಲಿ ಒಂದು ಕಂಬಕ್ಕೆ ನಾಲ್ಕು ಗಿಡದಂತೆ 500 ಕಂಬಕ್ಕೆ ಎರಡು ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಡ್ರ್ಯಾಗನ್​ ಹಣ್ಣಿನ ಬೆಳೆಯನ್ನು ಸಹೋದರರು ಮೂರು ಎಕರೆ ಪ್ರದೇಶಕ್ಕೆ ವಿಸ್ತರಿಸಿದ್ದಾರೆ. ಸುಮಾರು ಐದು ವರ್ಷಗಳಿಂದಲೂ ಡ್ರ್ಯಾಗನ್​ ಕೃಷಿ ಮಾಡ್ತಿರೋ ಇವರೀಗ ಲಕ್ಷಗಟ್ಟಲೆ ಗಳಿಕೆ ಮಾಡುತ್ತಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ಒಂದು ವರ್ಷಕ್ಕೆ 30 ಟನ್​ ಬೆಳೆದರೂ, ಸರಾಸರಿ 100 ರೂ ನಂತೆ ಹೋಲ್‌ಸೇಲ್‌ ಆಗಿ ಮಾರಾಟ ಮಾಡಿದ್ರೂ ವರ್ಷಕ್ಕೆ 30 ಲಕ್ಷ ರೂಪಾಯಿ ಆಗುತ್ತಿದೆ. ಇವರ ತೋಟದಲ್ಲಿ ಒಂದೊಂದು ಡ್ರ್ಯಾಗನ್​ ಹಣ್ಣು 400 ಗ್ರಾಂ.ನಿಂದ 2 ಕೆಜಿಯವರೆಗೂ ಇಳುವರಿ ತೂಗುತ್ತಿವೆ.

ಇದನ್ನೂ ಓದಿ:ಇದರ ಬೆಲೆ ಕೇಳಿದ್ರೆ ಮೂರ್ಛೆ ಹೋಗೋದು ಗ್ಯಾರಂಟಿ; ಪ್ರಪಂಚದ ಬಲು ದುಬಾರಿ ತರಕಾರಿ ಇದು

Last Updated : Dec 6, 2022, 9:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.