ETV Bharat / state

ಕರ್ನಾಟಕ ಬಂದ್ ಸಹಜ ಸ್ಥಿತಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

author img

By

Published : Dec 5, 2020, 9:16 AM IST

ಕರ್ನಾಟಕ ಬಂದ್​ ಬಿಸಿ ಬೆಂಗಳೂರಿನಲ್ಲಿ ಅಷ್ಟೇನೂ ತಟ್ಟಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಂದಿನಂತೆ ಪ್ರಯಾಣೀಕರು ವಿಮಾನ ನಿಲ್ದಾಣಕ್ಕೆ ಬರುತ್ತಿದೆ. ಯಾವುದೇ ಬದಲಾವಣೆ ಆಗಿಲ್ಲ. ಏರ್​ಪೋರ್ಟ್​ಗೆ ಎಂದಿನಂತೆ ಟ್ಯಾಕ್ಸಿ, ಓಲಾ, ಉಬರ್ ಸಹ ಸಂಚರಿಸುತ್ತಿವೆ..

airport
ಸಹಜ ಸ್ಥಿತಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ : ಕರ್ನಾಟಕ ಬಂದ್ ಬಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ, ಎಂದಿನಂತೆ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇರಿದಂತೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಓಡಾಡುತ್ತಿವೆ.

ಸಹಜ ಸ್ಥಿತಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮರಾಠ ಅಭಿವೃದ್ಧಿ ನಿಗಮಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಇಂದು ಕರ್ನಾಟಕ ಬಂದ್​​ಗೆ ಕರೆ ನೀಡಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (ಕೆಐಎಬಿ) ಬಂದ್​​ನ ಪರಿಣಾಮ ಬೀರಿಲ್ಲ, ಎಂದಿನಂತೆ ವಿಮಾನ ನಿಲ್ದಾಣಕ್ಕೆ ಸಂಚಾರಿಸುವ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸಂಚರಿಸುತ್ತಿವೆ. ಏರ್​ಪೋರ್ಟ್​ಗೆ ಟ್ಯಾಕ್ಸಿ, ಓಲಾ, ಉಬರ್ ಸಹ ಸಂಚರಿಸುತ್ತಿವೆ, ಪ್ರಯಾಣಿಕರು ಬೆಳ್ಳಂಬೆಳಗ್ಗೆಯೇ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ.
ಮಧ್ಯಾಹ್ನದ ಸಮಯಕ್ಕೆ ವಿಮಾನ ಇರುವವರು ಈಗಾಗಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದು ಏರ್​ಪೋರ್ಟ್ ಟರ್ಮಿನಲ್​​ನಲ್ಲಿ ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ಇನ್ನೂ ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೂ ಸಹ ಯಾವುದೇ ತೊಂದರೆಯಾಗಿಲ್ಲ, ಏರ್​ಪೋರ್ಟ್​​ನಿಂದ ಟ್ಯಾಕ್ಸಿ ಸೇವೆ ಮತ್ತು ಕೆಎಸ್​​ಆರ್​​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸೇವೆಗೆ ಸಿದ್ದವಾಗಿದ್ದು ಪ್ರಯಾಣಿಕರನ್ನ ತಮ್ಮ ಸ್ಥಳಗಳಿಗೆ ತಲುಪಿಸುತ್ತಿವೆ.
ಬಂದ್ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಿಮಾನ ನಿಲ್ದಾಣದ ಪ್ರವೇಶದಲ್ಲಿ ವಾಹನಗಳ ತಪಾಸಣೆಯನ್ನ ಪೊಲೀಸರು ಮಾಡುತ್ತಿದ್ದಾರೆ. ಬೋರ್ಡಿಂಗ್ ಪಾಸ್ ಇದ್ದವರಿಗೆ ಮಾತ್ರ ವಿಮಾನ ನಿಲ್ದಾಣದ ಒಳಗೆ ಪ್ರವೇಶ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಎಂದಿನಂತೆ ವಾಹನಗಳ ಸಂಚಾರ ಇದ್ದು, ಬಂದ್ ಹಿನ್ನೆಲೆ ರಜೆ ಇರುವುದರಿಂದ ಯುವ ಜನತೆ ಜಾಲಿ ರೈಡ್ ಹೊರಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.