ETV Bharat / state

ಆನೇಕಲ್ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ ನಾಮಪತ್ರ ಸಲ್ಲಿಕೆ - ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಶಿವಣ್ಣ ಅವರು ಸಂಸದ ಡಿ ಕೆ ಸುರೇಶ್ ,ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತಿತರ ನಾಯಕರೊಂದಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು.

congress candidate b shivanna submission nomination
ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ ನಾಮಪತ್ರ ಸಲ್ಲಿಕೆ
author img

By

Published : Apr 19, 2023, 9:55 PM IST

ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.

ಆನೇಕಲ್: (ಬೆಂಗಳೂರು ಗ್ರಾಮಾಂತರ): ಆನೇಕಲ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಶಿವಣ್ಣ ಅಪಾರ ಜನಸ್ತೋಮದೊಂದಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಮೂಲತಃ ಹುಳಿಮಾವು ನಿವಾಸಿಯಾಗಿರುವ ಬಿ.ಶಿವಣ್ಣ, ಆನೇಕಲ್ ಮೀಸಲು ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿದ್ದರು. ಈಗ ಮೂರನೇ ಬಾರಿಯೂ ಕಣಕ್ಕಿಳಿಯತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆನೇಕಲ್ ಕ್ಷೇತ್ರ ಕಾಂಗ್ರೆಸ್​​ ಭದ್ರಕೋಟೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಶಿವಣ್ಣ ಅವರು ಸಂಸದ ಡಿ.ಕೆ.ಸುರೇಶ್, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತಿತರ ನಾಯಕರೊಂದಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರದಲ್ಲಿ ಒಟ್ಟು ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ಸೇರಿ 5 ಕೋಟಿ 7 ಲಕ್ಷ 72 ಸಾವಿರದ 752 ರೂ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಬೃಹತ್ ಮೆರವಣಿಗೆಯಲ್ಲಿ ಸೇಬಿನ ಹಾರ, ವಿವಿಧ ಜಾನಪದ ಕಲಾ ಪ್ರಕಾರಗಳು ಜನಮನ ಸೆಳೆದವು. ಇಡೀ ದಿನ ಆನೇಕಲ್ ಪಟ್ಟಣದಲ್ಲಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಬಿಎಸ್ಎಫ್ ತುಕಡಿ ನಿಯೋಜಿಸಲಾಗಿತ್ತು.

ಬಿ.ಶಿವಣ್ಣ ಮಾತನಾಡಿ, 2013ರಲ್ಲಿ ನಾಮಪತ್ರ ಸಲ್ಲಿಸಿ, ಆನೇಕಲ್ ಕ್ಷೇತ್ರದ ಜನತೆ ಅಭೂತಪೂರ್ವ ಬೆಂಬಲ ಕೊಟ್ಟು ಜಯಶೀಲನಾಗಿ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2008ರಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಆದರೂ ಮೂಲಸೌಕರ್ಯಗಳಿಗೆ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ.

ವಿಶೇಷವಾಗಿ ಹತ್ತು ವರ್ಷಗಳಿಂದ ಯಾವುದೇ ರೀತಿಯ ಗಲಭೆಗಳಿಗೆ ಅವಕಾಶ ಕೊಟ್ಟಿಲ್ಲ. ಈ ಕ್ಷೇತ್ರವನ್ನೂ ಶಾಂತಿಯ ಪಥದಲ್ಲಿ ಒಯ್ದಿದ್ದೇನೆ. ನನಗೆ ಈ ಬಾರಿಯೂ ಅನೇಕಲ್ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ. ಆನೇಕಲ್ ಕ್ಷೇತ್ರವನ್ನೂ ಮಾದರಿ ಕ್ಷೇತ್ರವನ್ನಾಗಿ ಮಾಡಲೂ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿ.ಶಿವಣ್ಣ ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ಎರಡು ಬಾರಿ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದರು. ಈ ಕ್ಷೇತ್ರದಲ್ಲಿ ಉತ್ತಮ ಆಡಳಿತವನ್ನು, ಶಾಂತಿ ನೆಲೆಸುವಂತ ಕೆಲಸವನ್ನು ಮಾಡಿರುವಂತಹದ್ದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

ಹೈಕಮಾಂಡ್ ಎಲ್ಲಿ ಅವಕಾಶ ನೀಡುತ್ತೋ ಅಲ್ಲಿ ನಿಲ್ಲುವೆ: ಈಗಾಗಲೇ ನನಗೆ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ. ಯಾವ ಕ್ಷೇತ್ರವೆಂದು ಇನ್ನೂ ಸೂಚಿಸಿಲ್ಲ. ಎಲ್ಲಿ ಅಂತ ತಿಳಿಸಿದ ತಕ್ಷಣ ನಾಮಪತ್ರ ಸಲ್ಲಿಸುವೆ ಎಂದರು.

ಇದನ್ನೂಓದಿ: ಅರುಣ್ ಸಿಂಗ್ ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ: 41 ಮಂದಿಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.