ETV Bharat / state

ಮಹಿಳಾ ಸಮಾಜದಲ್ಲಿ ಪುರುಷರ ಪಾರುಪತ್ಯ ಆರೋಪ : ಬಣ ಬದಲಾಯಿಸಿದ ನಿರ್ದೇಶಕರು - ಈಟಿವಿ ಭಾರತ ಕನ್ನಡ

ದೊಡ್ಡಬಳ್ಳಾಪುರದ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಆಪರೇಷನ್​ ಕಮಲ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ ಇದನ್ನು ನಿರಾಕರಿಸಿರುವ ನಿರ್ದೇಶಕರು ಮಹಿಳಾ ಸಮಾಜದಲ್ಲಿ ಪುರುಷರ ಪಾರುಪತ್ಯ ವಿರೋಧಿಸಿ ನೂತನ ಅಧ್ಯಕ್ಷೆ ವತ್ಸಲಾ ಅವರಿಗೆ ಬೆಂಬಲ ಸೂಚಿಸಿದ್ದಾಗಿ ಹೇಳಿದ್ದಾರೆ.

allegation-of-operation-kamala-in-mahila-samaja-election
ಮಹಿಳಾ ಸಮಾಜದಲ್ಲಿ ಪುರುಷರ ಪಾರುಪತ್ಯ ಆರೋಪ : ಬಣ ಬದಲಾಯಿಸಿದ ನಿರ್ದೇಶಕರು
author img

By

Published : Nov 8, 2022, 7:50 PM IST

ದೊಡ್ಡಬಳ್ಳಾಪುರ : ಮಹಿಳಾ ಸಮಾಜದ ಅಧ್ಯಕ್ಷರ ಚುನಾವಣೆಯಲ್ಲಿ ಆಪರೇಷನ್ ಕಮಲದ ಕೂಗು ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿದ ನಿರ್ದೇಶಕರು
ಮಹಿಳಾ ಸಮಾಜದಲ್ಲಿ ಪುರುಷರ ಪಾರುಪತ್ಯ ವಿರೋಧಿಸಿ ಅಧ್ಯಕ್ಷ ಸ್ಥಾನಕ್ಕೆ ವತ್ಸಲಾ ಅವರಿಗೆ ಬೆಂಬಲ ನೀಡಿದ್ದಾಗಿ ಹೇಳಿದ್ದಾರೆ.

ನಗರದ ಮಹಿಳಾ ಸಮಾಜ ಕಸ್ತೂರ ಬಾ ಶಿಶು ವಿಹಾರ ಸಂಘಕ್ಕೆ ಅಕ್ಟೋಬರ್ 28ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ವತ್ಸಲಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ನಿರ್ದೇಶಕರಾದ ಕೆ.ಎಸ್. ಪ್ರಭಾ ಮತ್ತು ದೇವಕಿ ಎಲ್.ಸಿ ಅವರು ವತ್ಸಲಾ ಅವರು ಅಪರೇಷನ್ ಕಮಲದ ಮೂಲಕ ಅಧ್ಯಕ್ಷರಾಗಿದ್ದಾರೆ. ನಮ್ಮ ಬಣದಲ್ಲಿ ಗೆದ್ದಿದ್ದ ವರಲಕ್ಷ್ಮೀ ಟಿ.ಪಿ ಮತ್ತು ಸರೋಜಮ್ಮ ಕೆ.ಎಲ್ ಅವರು ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆಂದು ಆರೋಪ ಮಾಡಿದ್ದರು.

ಆದರೆ ಈ ಆರೋಪವನ್ನು ವರಲಕ್ಷ್ಮೀ ಮತ್ತು ಸರೋಜಮ್ಮ ಅಲ್ಲಗೆಳೆದಿದ್ದಾರೆ. ಕೆ.ಎಸ್. ಪ್ರಭಾ ಅವರು ಮಹಿಳಾ ಸಮಾಜದ ಅಧ್ಯಕ್ಷರಾಗಿದ್ದರೂ ಅವರ ಪತಿ ಕೆ.ಪಿ. ಜಗನ್ನಾಥ್ ಆಡಳಿತ ನಡೆಸುತ್ತಿದ್ದರು. ಅವರ ಸರ್ವಾಧಿಕಾರಿ ಥೋರಣೆಯಿಂದ ಬೇಸತ್ತು ಹೋಗಿದ್ದೆವು. ನಮ್ಮ ಅಭಿಪ್ರಾಯಗಳಿಗೆ ಗೌರವ ಕೊಡುತ್ತಿರಲಿಲ್ಲ. ಚುನಾವಣೆ ಮುನ್ನ ಹೊಸಬರಿಗೆ ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿದ್ದ ಪ್ರಭಾ ಮತ್ತು ದೇವಕಿ, ಚುನಾವಣೆ ನಂತರ ಅಧಿಕಾರ ತಮಗೆ ಬೇಕೆನ್ನುತ್ತಿದ್ದಾರೆ. ಈ ವರ್ತನೆಗೆ ಬೇಸತ್ತು ವತ್ಸಲಾ ಅವರಿಗೆ ಬೆಂಬಲ ನೀಡಿದ್ದಾಗಿ ವರಲಕ್ಷ್ಮೀ ಮತ್ತು ಸರೋಜಮ್ಮ ಹೇಳಿದ್ದಾರೆ.

2017ರಲ್ಲಿ ಮಹಿಳಾ ಸಮಾಜಕ್ಕೆ ನಡೆದಿದ್ದ ಅಧ್ಯಕ್ಷ ಚುನಾವಣೆಯಲ್ಲಿ ಪ್ರಭಾ ಮತ್ತು ದೇವಕಿಯವರು ನಿರ್ದೇಶಕರನ್ನು ಒಂದು ವಾರ ದೇವಸ್ಥಾನಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದರು. ಬಳಿಕ ಇವರು ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಳೆದ 20 ವರ್ಷಗಳಿಂದ ಪ್ರಭಾ ಮತ್ತು ದೇವಕಿ ಮಹಿಳಾ ಸಮಾಜದಲ್ಲಿ ಅಧಿಕಾರ ಅನುಭವಿಸಿದ್ದಾರೆ. ಈಗ ಅಧಿಕಾರ ಕೈ ತಪ್ಪಿತು ಅನ್ನುವ ಕಾರಣಕ್ಕೆ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ ಎಂದು ನೂತನ ಅಧ್ಯಕ್ಷರಾದ ವತ್ಸಲಾ ಆರೋಪಿಸಿದ್ದಾರೆ.

ಇದನ್ನೂ ಓದಿ : ಮಹಿಳಾ ಸಮಾಜಕ್ಕೂ ಕಾಲಿಟ್ಟ ಆಪರೇಷನ್ ಕಮಲ: ಬಿಜೆಪಿ ತೆಕ್ಕೆಗೆ ಬಿದ್ದ ಇಬ್ಬರು ನಿರ್ದೇಶಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.