ETV Bharat / state

ಲಾಕ್‌ಡೌನ್​ ಅವಧಿಯ ಸದುಪಯೋಗ: ಇಡೀ ಮನೆಯನ್ನೇ ಆರ್ಟ್ ಗ್ಯಾಲರಿ ಮಾಡಿದ ಯುವತಿ

author img

By

Published : Mar 25, 2021, 9:38 PM IST

Updated : Mar 26, 2021, 1:28 PM IST

ಲಾಕ್​ ಡೌನ್​ ಅವಧಿಯಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿದ ದೊಡ್ಡಬಳ್ಳಾಪುರದ ಯುವತಿಯೊಬ್ಬಳು, ಇಡೀ ಮನೆಯನ್ನೇ ಆರ್ಟ್ ಗ್ಯಾಲರಿಯನ್ನಾಗಿ ಮಾಡಿದ್ದಾಳೆ. ಈಕೆಯ ಪ್ರತಿಭೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

A young woman turned her home into an art gallery
ಮನೆಯನ್ನೇ ಆರ್ಟ್ ಗ್ಯಾಲರಿ ಮಾಡಿದ ಯುವತಿ

ದೊಡ್ಡಬಳ್ಳಾಪುರ: ಲಾಕ್​ ಡೌನ್​ ಅವಧಿಯಲ್ಲಿ ಸುಮ್ಮನೆ ಮನೆಯಲ್ಲಿ ಕೂರುವುದರ ಬದಲು ಚಿತ್ರ ಬಿಡಿಸಲು ಪ್ರಾರಂಭಿಸಿದ ಯುವತಿಯೊಬ್ಬಳು, ಇಡೀ ಮನೆಯನ್ನೇ ಆರ್ಟ್ ಗ್ಯಾಲರಿಯನ್ನಾಗಿ ಮಾಡಿದ್ದಾಳೆ.

ಪೆನ್ಸಿಲ್ ಆರ್ಟ್

ನಗರದ ಕಚೇರಿಪಾಳ್ಯದ ಚಿನ್ನಮ್ಮ ಮತ್ತು ಮಂಜುನಾಥ ದಂಪತಿಯ ಪುತ್ರಿ ಅಂಬಿಕಾ ತನ್ನ ಮನೆಯನ್ನು ಚಿತ್ರಾಲಯವನ್ನಾಗಿ ಮಾಡಿದ್ದಾಳೆ. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜ್​ನಲ್ಲಿ ಪೊಲಿಟಿಕಲ್​ ಸೈನ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಈಕೆ, ಲಾಕ್​ ಡೌನ್​ ಅವಧಿಯಲ್ಲಿ ಚಿತ್ರ ಬಿಡಿಸಲು ಪ್ರಾರಂಭಿಸಿ, ಇಡೀ ಮನೆಯನ್ನು ಅರ್ಟ್ ಗ್ಯಾಲರಿಯಾಗಿ ಪರಿವರ್ತಿಸಿದ್ದಾಳೆ.

ಮನೆಯನ್ನೇ ಆರ್ಟ್ ಗ್ಯಾಲರಿ ಮಾಡಿದ ಯುವತಿ

ಮೊದಲು ಮನೆಯ ಅವರಣದಲ್ಲಿದ್ದ ರುಬ್ಬುವ ಕಲ್ಲಿನಲ್ಲಿ ವರ್ಲಿ ಆರ್ಟ್ ಬಿಡಿಸಿದ ಅಂಬಿಕಾ, ಬಳಿಕ ಮನೆಯ ಗೋಡೆಯ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದ್ದಳು. ಮನೆಯ ಗೋಡೆಗಳನ್ನೇ ಕ್ಯಾನ್ವಾಸ್ ಮಾಡಿಕೊಂಡ ಈಕೆ, ಪೆನ್ಸಿಲ್ ಮೂಲಕ ಹಲವಾರು ಚಿತ್ರಗಳನ್ನು ಬಿಡಿಸಿದ್ದಾಳೆ. ಆರಂಭದಲ್ಲಿ ಅಂಬಿಕಾ ಗೋಡೆ ಮೇಲೆ ಚಿತ್ರ ಬಿಡಿಸುವುದನ್ನು ಕಂಡು ಮನೆಯವರು, ಗೋಡೆ ಹಾಳು ಮಾಡುತ್ತಿಯಾ ಎಂದು ಬೈದಿದ್ದರಂತೆ. ಆದರೂ ಚಿತ್ರ ಬಿಡಿಸುವುದನ್ನು ಮುಂದುವರೆಸಿದ ಅಂಬಿಕಾ, ಬುದ್ದ, ನಿಸರ್ಗ ಮತ್ತು ಹೆಣ್ಣಿನ ಚಿತ್ರಗಳನ್ನ ಗೋಡೆ ಮೇಲೆ ಬಿಡಿಸಿದ್ದಾಳೆ. ಇದೀಗ ಮಗಳ ಚಿತ್ರಕಲೆ ನೋಡಿ ಮನೆ ಮಂದಿ ಸಂತಸಗೊಂಡಿದ್ದಾರಂತೆ.

ಪಾಟ್​ ಆರ್ಟ್

ಸದ್ಯ, ರುಬ್ಬುವ ಕಲ್ಲು, ಬೀರು, ಬಾಗಿಲು, ಬಿಯರ್ ಬಾಟಲ್, ಹೂವಿನ ಕುಂಡಗಳು ಸೇರಿದಂತೆ ಎಲ್ಲೆಡೆ ಅಂಬಿಕಾ ಚಿತ್ರಗಳನ್ನು ಬಿಡಿಸಿದ್ದಾರೆ. ಮನೆಗೆ ಬರುವ ಸ್ನೇಹಿತರು ಅಂಬಿಕಾ ಕಲೆಗೆ ಮನಸೋತು ಹೋಗಿದ್ದಾರಂತೆ. ಕೆಲ ಸ್ನೇಹಿತರು ತಮ್ಮ ಮನೆಗೂ ಅಂಬಿಕಾಳನ್ನು ಕರೆಸಿಕೊಂಡು ಚಿತ್ರಗಳನ್ನು ಬರೆಸಿಕೊಂಡಿದ್ದಾರಂತೆ. ವಿದ್ಯಾಭ್ಯಾಸದಲ್ಲೂ ಮುಂದಿರುವ ಅಂಬಿಕಾ ಪೊಲಿಟಿಕಲ್​ ಸೈನ್ಸ್​ ನಲ್ಲಿ ಉತ್ತಮ ಅಂಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.

ಕಸದಿಂದ ರಸ

Last Updated : Mar 26, 2021, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.