ನೆಲಮಂಗಲ: ವ್ಯಕ್ತಿಯೊಬ್ಬ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಲಾಡ್ಜ್ವೊಂದರಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಜೋಧ್ಪುರ ಮೂಲದ ಪ್ರದೀಪ್ ಸಿಂಗ್ ಶೇಖಾವತ್ (40) ಮೃತ ದುರ್ದೈವಿ. ಈತ ಕಳೆದೆರಡು ದಿನಗಳ ಹಿಂದೆ ನಗರದ ಲಾಡ್ಜ್ವೊಂದರಲ್ಲಿ ರೂಮ್ ಬಾಡಿಗೆ ಪಡೆದಿದ್ದನು. ಮುಂಜಾನೆ ರೂಮ್ ಬಾಯ್ ಮೃತನ ಕೊಠಡಿ ಬಳಿ ಹೋದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ನೆಲಮಂಗಲ ನಗರ ಪೊಲೀಸರು ಭೇಟಿ ನೀಡಿ, ರೂಮ್ ಬಾಗಿಲು ಹೊಡೆದು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತ ಪ್ರದೀಪ್ ಸಿಂಗ್ ಶೇಖಾವತ್ ನೀಲಮ್ ಎಂಬಾಕೆಯನ್ನು 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ 6 ವರ್ಷದ ಹೆಣ್ಣು ಮಗುವಿದೆ. ಈತ ಆಡುಗೋಡಿಯ ರೇಜರ್ ಗೇಟ್ ವೇ ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಮಾನಸಿಕವಾಗಿ ನೊಂದಿದ್ದ ಈತ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: Mysuru Gangrape Case: ಮುಂದುವರಿದ ಪೊಲೀಸ್ ತನಿಖೆ, ಮೂವರು ಆರೋಪಿಗಳ ಬಂಧನ?