ETV Bharat / state

ಜಿಮ್ಮು, ಪರಿಚಯ, ಲೈಂಗಿಕ ಸಂಪರ್ಕ: ಯುವತಿ ಕಿರುಕುಳಕ್ಕೆ ಬೇಸತ್ತು ಉದ್ಯಮಿ ನೇಣಿಗೆ ಶರಣು - ದೊಡ್ಡಬಳ್ಳಾಪುರದಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ವಿರುದ್ಧ ಯುವತಿವೋರ್ವಳು ದೂರು ದಾಖಲಿಸಿದ್ದಕ್ಕೆ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

a man Commits Suicided in Doddaballapur
ದೊಡ್ಡಬಳ್ಳಾಪುರದಲ್ಲಿ ಉದ್ಯಮಿ ಆತ್ಮಹತ್ಯೆ
author img

By

Published : Apr 1, 2021, 7:10 PM IST

ದೊಡ್ಡಬಳ್ಳಾಪುರ : ಯುವತಿಯೊಬ್ಬಳು ಜೀವ ಬೆದರಿಕೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿದ್ದರಿಂದ ಮನನೊಂದು ಉದ್ಯಮಿ ನೇಣಿಗೆ ಶರಣಾಗಿದ್ದಾರೆ. ನಗರದ ಕರೇನಹಳ್ಳಿಯಲ್ಲಿ ಉದ್ಯಮಿ ರಾಜಣ್ಣ (55) ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಹಿನ್ನೆಲೆ : ಮೃತ ರಾಜಣ್ಣನ ಮಗ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಈ ಸಮಯದಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರುತ್ತಾನೆ. ಈ ಸಂಬಂಧ 7 ಮೇ 2019 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಗೌತಮ್ ಮತ್ತು ಆತನ ತಂದೆ ರಾಜಣ್ಣ ಜೈಲು ಪಾಲಾಗಿ, ಬಳಿಕ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದರು.

ಸದ್ಯ, ಸಂತ್ರಸ್ತ ಯುವತಿ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತಂದೆ ಗೌತಮ್ ಎಂಬುದನ್ನು ಸಾಬೀತುಪಡಿಸಲು ಡಿಎನ್​ಎ ಟೆಸ್ಟ್ ನಡೆಯಲಿದೆ. ಈ ನಡುವೆ ಗೌತಮ್ ಮತ್ತು ರಾಜಣ್ಣ ಸಂತ್ರಸ್ತ ಯುವತಿಗೆ ಜೀವ ಬೆದರಿಕೆಯೊಡ್ಡಿ ಕಿರುಕುಳ ನೀಡಿ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾಗಿ 28 ಮಾರ್ಚ್​ 20121 ರಂದು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಕಿರುಕುಳ ಪ್ರಕರಣ ದಾಖಲಾಗಿದೆ. ಇದರಿಂದ ಮನನೊಂದು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಪ್ರಕರಣ ದಾಖಲಾದ ಮೂರೇ ದಿನಕ್ಕೆ ಆತ್ಮಹತ್ಯೆ :

ಸಂತ್ರಸ್ತ ಯುವತಿಯು ಗೌತಮ್ ಮತ್ತು ರಾಜಣ್ಣ ವಿರುದ್ಧ ಪ್ರಕರಣ ದಾಖಲಿಸಿದ ಮೂರನೇ ದಿನದಂದು ರಾಜಣ್ಣ ತಮ್ಮ ಮನೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ತನ್ನ ಗಂಡನ ಸಾವಿಗೆ ಸಂತ್ರಸ್ತ ಯುವತಿಯೇ ಕಾರಣ ಎಂದು ಆರೋಪಿಸಿ ಮೃತ ರಾಜಣ್ಣ ಪತ್ನಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ : ಕುಷ್ಟಗಿ: ರಾಡ್​ನಿಂದ ಹೊಡೆದು ಹೆಂಡತಿಯನ್ನು ಕೊಂದ ಪಾಪಿ ಪತಿ

ಮಾರ್ಚ್ 30ರಂದು ಸಂತ್ರಸ್ತ ಯುವತಿ ರಾಜಣ್ಣ ಅವರಿಗೆ'ನಿನ್ನ ಮೇಲೆ ಎರಡು ಕೇಸ್ ಇದ್ದರೂ ಬದುಕಿದ್ದೀಯಾ ಎಂದು ನಿಂದಿಸಿದ್ದಾಳೆ. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಯುವತಿಯೇ ಕಾರಣ' ಎಂದು ಮೃತ ಉದ್ಯಮಿಯ ಪತ್ನಿ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.